ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದ ಎ.ಕೆ. ಸುಬ್ಬಯ್ಯ ಅವರು ತಮ್ಮ ಕಟುವಾದ ಟೀಕೆಗಳಿಂದ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದರು. ಸುಬ್ಬಯ್ಯ ಮಾತಿಗೆ ನಿಂತರೆ ತರ್ಕಬದ್ಧವಾದ ರೀತಿಯಲ್ಲಿ ಆಡಳಿತಯಂತ್ರದ ಲೋಪವನ್ನು ಬಯಲಿಗೆ ಎಳೆಯುತ್ತಿದ್ದರು. ಮೇಲ್ಮನೆಯಲ್ಲಿ ಮಾತಿನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿ ಇಡಲು ಯತ್ನಿಸಿದವರಲ್ಲಿ ಸುಬ್ಬಯ್ಯ ಕೂಡ ಒಬ್ಬರು. ಸುಬ್ಬಯ್ಯ ಅವರು ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ’ನುಡಿಯೆಂಬುದು ಉರಿಯ ಕೆಂಡ’ ಈ ಸಂಪುಟಗಳ ಪೈಕಿ ಮೊದಲನೆಯದು. ಸುಬ್ಬಯ್ಯನವರ ಸದನದ ಭಾಷಣಗಳನ್ನು ಓದುವ ಮೂಲಕ ಮಾತಿನ ವೈಖರಿಯನ್ನು ಅರಿಯಬಹುದು.
©2025 Book Brahma Private Limited.