‘ಕರ್ಮ ಸಿದ್ಧಾಂತ’ ಡಾ.ಬಸವರಾಜ ಸಬರದ ಅವರ ಉಪನ್ಯಾಸದ ಪಠ್ಯರೂಪ. 30-01-1998 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು, ರಾಯಚೂರ ಜಿಲ್ಲೆಯ ಬೆಟ್ಟದೂರ ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮಾಲೆಯಲ್ಲಿ ನೀಡಿದ ಉಪನ್ಯಾಸವಿದು ಎಂದಿದ್ದಾರೆ ಬಸವರಾಜ ಸಬರದ. ಕರ್ಮಸಿದ್ಧಾಂತದ ಕುರಿತಂತೆ ಭಾರತೀಯ ಧರ್ಮಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳಿವೆ. ಅವೆಲ್ಲವುಗಳನ್ನು ಸೂಕ್ಷ್ಮವಾಗಿ ಸಮೀಕ್ಷಿಸಿ ಕೊನೆಯಲ್ಲಿ ತೌಲನಿತ ವಿವೇಚನೆ ನಡೆಸಿದ್ದೇನೆ. ಇಂತಹ ಕೃತಿಯೊಂದು ಸಾಮಾನ್ಯ ಓದುಗರಲ್ಲಿ ತಿಳುವಳಿಕೆಯನ್ನುಂಟು ಮಾಡಿದರೆ ಈ ಬರವಣಿಗೆಯ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ ಎಂದಿದ್ದಾರೆ ಲೇಖಕ ಬಸವರಾಜ ಸಬರದ. ಕೃತಿಯಲ್ಲಿ ಪ್ರಸ್ತಾವನೆ, ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ, ಮನು ಸಂಹಿತೆ, ಲೋಕಾಯತ, ಜೈನ ಧರ್ಮ, ಬೌದ್ಧ ಧರ್ಮ, ಇತರ ಧರ್ಮಗಳು, ಶರಣರ ದೃಷ್ಟಿ ಹಾಗೂ ಸಮಾರೋಪ ಸಂಕಲನಗೊಂಡಿವೆ.
©2024 Book Brahma Private Limited.