ಬಿ.ವಿ, ಕಕ್ಕಿಲ್ಲಾಯ ಅವರು ಹಿರಿಯ ಸ್ವಾತಂತ್ಯ್ರ ಹೋರಾಟಗಾರರು. ಕರ್ನಾಟಕ ಏಕೀಕರಣ ಚಳವಳಿಯ ನಾಯಕರು. ಭಾರತ ಕಮ್ಯುನಿಸ್ಟ್ ಪಕ್ಷದ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಹಿರಿಯ ನಾಯಕರು. ಕರ್ನಾಟಕ ವಿಧಾನಸಭೆ ಹಾಗೂ ರಾಜ್ಯ ಸಭೆಯ ಮಾಜಿ ಸದಸ್ಯರು. ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳು. ರೈತ-ಕಾರ್ಮಿಕರ ಹಕ್ಕುಗಳೇನೆಂದು ತಿಳಿಯದಿದ್ದ ಕಾಲದಲ್ಲೇ (1940-50) ರೈತ-ಕಾರ್ಮಿಕರನ್ನು ಸಂಘಟಿಸಿ ಹೋರಾಡಿದವರು. 1972 ರಿಂದ 1983ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ವಿಟ್ಲ ವಿಧಾನಸಭೆಯನ್ನು ಪ್ರತಿನಿಧಿಸಿ, ಕರ್ನಾಟಕ ವಿಧಾನಸಭೆಯನ್ನು ಪ್ರವೇಶಿಸಿದ್ದರು. 1952ರ ಮೊದಲ ರಾಜ್ಯಸಭಾ ಸದಸ್ಯರಾಗಿ ಮದ್ರಾಸ್ ಪ್ರಾಂತ್ಯದಿಂದ ಆಯ್ಕೆಯಾಗಿ, ಉತ್ತಮ ಜನನಾಯಕತ್ವವನ್ನು ಪಡೆದಿದ್ದರು. ಆದರೆ, ಇಂದು ಇಂತಹ ವಿದ್ವತ್ತಿನ ಮಾದರಿ ವ್ಯಕ್ತಿತ್ವದ ಜನಪ್ರತಿನಿಧಿಗಳು ಕಡಿಮೆ. ಇಂತಹ ಸಂದರ್ಭದಲ್ಲಿ ಪ್ರಕಟಗೊಂಡ ’ಕರ್ನಾಟಕದ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ” ಕೃತಿಯು ಉತ್ತಮ ಮಾರ್ಗದರ್ಶಿಯಾಗಿದೆ. ಬಿ.ವಿ.ಕಕ್ಕಿಲ್ಲಾಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಚಾರಗಳು, ಬಜೆಟ್ ಮೇಲಿನ ಚರ್ಚೆ ಇತ್ಯಾದಿಗಳನ್ನು ಅತ್ಯಂತ ಪರಿಶ್ರಮದಿಂದ ಸಂಗ್ರಹಿಸಿ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.