ಲೇಖಕ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕೃತಿ-ಕಾಮ್ರೇಡ್ ಡಾಂಗೆಯುವರ ಭಾಷಣಗಳು. ಶ್ರೀಪಾದ ಅಮೃತ ಡಾಂಗೆ ಅವರು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ನಾಯಕರು. ಸಾಮ್ಯವಾದಿ (1922) ಹಾಗೂ ಕ್ರಾಂತಿ (1927) ಪತ್ರಿಕೆಗಳನ್ನು ನಡೆಸಿದರು. ಶಾಸಕರಾಗಿ, ಸಂಸದರಾಗಿ, AITUC ಅಧ್ಯಕ್ಷರಾಗಿ, CPI ಅಧ್ಯಕ್ಷರಾಗಿದ್ದರು. ಭಾರತೀಯ ಟ್ರಡ್ ಯೂನಿಯನ್ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡಿದವರು. ಬ್ರಿಟಿಷ್ ಸರ್ಕಾರದ ವಿರುದ್ಧ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಲೇ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿದ ಆರೋಪ ಮೇಲೆ ಅವರನ್ನು ಒಟ್ಟು 13 ವರ್ಷ ಕಾಲ ಜೈಲಿನಲ್ಲಿ ಬಂಧಿಸಿದ್ದರು.
ಮುಂದೆ ಸಿಪಿಐ ಪಕ್ಷವು ಸಿಪಿಎಂ ಎಂದು ವಿಭಜನೆಯಾದ ನಂತರವೂ ಅವರು 1978ರವರೆಗೆ ಸಿಪಿಐ ಪಕ್ಷದ ಸೂತ್ರ ಹಿಡಿದಿದ್ದರು. ಭಾಷಾವಾರು ಪ್ರಾಂತ್ಯಗಳ ವಿಭಜನೆ ಸಮಯದಲ್ಲೂ ಡಾಂಗೆ ಅವರು ಮಹಾರಾಷ್ಟ್ರ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಡಾಂಗೆ ಅವರ ಭಾಷಣಗಳು ಕಾರ್ಮಿಕರ ಮೇಲೆ ತುಂಬಾ ಪ್ರಭಾವ ಬೀರುತ್ತಿದ್ದು, ದೇಶದಲ್ಲಿ ಕಮ್ಯೂನಿಸ್ಟ್ ಚಳವಳಿ ತೀವ್ರಗೊಂಡು ಜನಮನದಲ್ಲಿ ಪಕ್ಷದ ಧ್ಯೇಯ-ಧೋರಣೆಗಳು ನೆಲೆಗೊಳ್ಳುವಂತೆ ಮಾಡಿದ್ದನ್ನು ಮರೆಯುವಂತಿಲ್ಲ. ಅವರ ಏಳು ಭಾಷಣಗಳನ್ನು ಇಲ್ಲಿ ಭಾಷಾಂತರಿಸಲಾಗಿದೆ. 22 ಮೇ 1991 ರಂದು ಕಾಮ್ರೇಡ್ ಡಾಂಗೆ ಅವರು ನಿಧನರಾದರು.
©2024 Book Brahma Private Limited.