ಕೆಂಗಲ್ ಹನುಮಂತರಾಯರು ಮೈಸೂರು ಮಹಾರಾಜ ಅವರಿಂದ ರಾಜರ್ಷಿ ಎಂಬ ಬಿರುದು ಪಡೆದ ಹಾಗೂ ಬೆಂಗಳೂರಿನಲ್ಲಿ ವಿಧಾನಸೌಧ ನಿರ್ಮಿಸಿದ ಅಂದಿನ ಮುಖ್ಯಮಂತ್ರಿ ಖ್ಯಾತಿ ಉಳ್ಳವರು. ಅವರು ವಿಧಾನಸೌಧದ ಒಳಗೆ ಹಾಗೂ ಹೊರಗೆ ಮಾಡಿರುವ ದಾಖಲಾರ್ಹ ಭಾಷಣಗಳನ್ನು ಲೇಖಕ ಪ್ರೊ. ಕೆ.ಎಸ್. ಭವಾನ್ ಅವರು ಸಂಗ್ರಹಿಸಿ, ಸಂಪಾದಿಸಿ ಒಂದೆಡೆ ನೀಡಿದ್ದೇ ಈ ಕೃತಿಯ ಹೆಗ್ಗಳಿಕೆ. ಪ್ರತಿ ಭಾಷಣದಲ್ಲಿ ರಾಜ್ಯದ ಉನ್ನತಿ, ಅಭಿವೃದ್ಧಿ, ಮಾನವೀಯ ಅಂಶಗಳು, ಅವರ ದೂರದೃಷ್ಟಿ ಇತ್ಯಾದಿ ಅಂಶಗಳನ್ನು ಗುರುತಿಸಬಹುದು.
©2025 Book Brahma Private Limited.