ಪ್ರೊ. ಟಿ.ಎಸ್.ವೆಂಕಣ್ಣಯ್ಯನವರು ಎ.ಆರ್. ಕೃಷ್ಣಶಾಸ್ತ್ರಿಗಳ ಆಪ್ತರು. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವು ಇವರ ಮಧ್ಯೆ ವಿನಿಮಯಗೊಳ್ಳುತ್ತಿತ್ತು. ವೆಂಕಣ್ಣಯ್ಯನವರು ಇಹಲೋಕ ತ್ಯೆಜಿಸಿದಾಗ ಅವರ ಸ್ನೇಹದ ಕುರುಹಾಗಿ, ಶಾಸ್ತ್ರಿಗಳು ವೆಂಕಣ್ಣಯ್ಯನವರಿಗೆ ಸಂಬಂಧಿಸಿದ ವೈಚಾರಿಕ-ಬೌದ್ಧಿಕ-ಸಾಹಿತ್ಯಕ-ಭಾಷೆ-ಸಾಮಾಜಿಕ-ಹೀಗೆ ಹಲವು ವಲಯಗಳ ವಿಚಾರಗಳನ್ನು ಸಂಗ್ರಹಿಸಿ ನೀಡಿದ್ದರ ಫಲವೇ ಈ ಕೃತಿ-ಭಾಷಣಗಳು ಮತ್ತು ಲೇಖನಗಳು-ಸಂಪುಟ-1.
ದಿವಂಗತ ಶ್ರೀಮಾನ್ ಟಿ.ಎಸ್.ವೆಂಕಣ್ಣಯ್ಯನವರು ಕುರಿತು ಸವಿವರವಾದ ಪೀಠಿಕೆ-ಪ್ರಸ್ತಾವನೆ, ಭಾಷಣದ ವಿಭಾಗದಲ್ಲಿ ಇಂದಿನ ಜನಜೀವನದಲ್ಲಿ ಕನ್ನಡ, ಸಾಹಿತ್ಯೋತ್ಸವದ ಆರಂಭ ಭಾಷಣ ಹಾಗೂ ಲೇಖನಗಳ ವಿಭಾಗದಲ್ಲಿ, ರನ್ನನ ರಸ ಪ್ರತಿಪಾದನೆ, ಹರಿಶ್ಚಂದ್ರ ಕಾವ್ಯ, ಮಲ್ಲಿಕಾರ್ಜುನ -ಒಂದು ಊಹೆ, ತತ್ವಶಾಸ್ತ್ರ ಮತ್ತು ಅದರ ಪರಿಹಾರಗಳು, ದೇವೀ ಭಾಗವತ -ಲೇಖನಗಳಿವೆ.
©2024 Book Brahma Private Limited.