ಸಭೆ-ಸಮಾರಂಭಗಳಲ್ಲಿ ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ನೀಡಿರುವ ಭಾಷಣ-ಉಪನ್ಯಾಸಗಳ ಸಂಗ್ರಹವೇ ‘ಮತ್ತೆ ಕಲ್ಯಾಣ ಹಾಗೆಂದರೇನು?’ ಕೃತಿ. ಇಲ್ಲಿ 24 ಲೇಖನಗಳಿವೆ. ಈ ಎಲ್ಲ ಲೇಖನಗಳ ಒಟ್ಟು ವೈಚಾರಿಕ ಮೂಲ-ಶರಣರು. ಹೀಗಾಗಿ, ಅವರ ವಿಚಾರಗಳು ಓದುಗರಿಗೆ ತಲುಪಿಸುವ ಉದ್ದೇಶದೊಂದಿಗೆ ಅಕ್ಷರಕ್ಕೆ ಇಳಿಸಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ. ಇವನಾರವ ಜಾತಿ, ಇವನಾರವ ಧರ್ಮ, ಬದುಕಿನ ನಿಗೂಢತೆಗೆ ವಚನಕಾರರ ಉತ್ತರ, ಬುದ್ಧನಂತೆಯೇ ಮಾತನಾಡಿದ ಬಸವಣ್ಣ, ಕನ್ನಡ ವೃತ್ತಿ ರಂಗಭೂಮಿ ಮತ್ತೆ ಶರಣರ ನಾಟಕಗಳು ಹೀಗೆ ವಿಷಯ ವೈವಿಧ್ಯತೆಯ ಲೇಖನಗಳಿವೆ.
©2024 Book Brahma Private Limited.