ದಲಿತ ಚಳವಳಿಯ ನಾಯಕ ಕೃಷ್ಣಪ್ಪ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಇಂದಿರಾ ಕೃಷ್ಣಪ್ಪ ಅವರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯಲ್ಲಿ ಬಯಲು ಬೆತ್ತಲೆ ಚಂದ್ರಗುತ್ತಿ ಎಂಬ ಸುದೀರ್ಘ ಲೇಖನವಿದ್ದು, ಅದರ ಜೊತೆಗೇ ಕೃಷ್ಣಪ್ಪ ಅವರು ವಿವಿಧ ಸಮಾವೇಶಗಳಲ್ಲಿ, ವೇದಿಕೆಗಳಲ್ಲಿ ಮಾಡಿದ ಭಾಷಣಗಳು ಮತ್ತು ಪತ್ರಿಕೆಗಳಿಗೆ ನೀಡಿದ ಸಂದರ್ಶನವನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ. ಸತ್ಯ ಘಟನೆಗಳನ್ನು ಆಧರಿಸಿದ ವರದಿ 'ಕೋಮು ದಳ್ಳುರಿಯ ಆಂತರ್ಯ' ಇನ್ನೊಂದು ಪ್ರಮುಖ ಅಧ್ಯಾಯವಾಗಿದೆ.
©2025 Book Brahma Private Limited.