ಶ್ರೀನಿವಾಸ ಕಾವ್ಯನಾಮದ ಮೂಲಕ ಖ್ಯಾತರಾದ ಮಾಸ್ತಿ ವೆಂಕಟೇಶ ಅಯಂಗಾರ್ ಅವರು ನಾಡಿನ ಬೇರೆ ಬೇರೆ ಕಡೆ ಮಾಡಿದ ಭಾಷಣ-ಉಪನ್ಯಾಸಗಳು ಈ ಕೃತಿಯಲ್ಲಿ (ಸಾಹಿತ್ಯ ಒಂದು ಉಪನ್ಯಾಸ) ಒಳಗೊಂಡಿವೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕರ್ಣಾಟಕ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ (1924ರಲ್ಲಿ ಮೊದಲು ಪ್ರಕಟ ಹಾಗೂ 1954ರಲ್ಲಿ ಮರುಮುದ್ರಣ) ಸಾಹಿತ್ಯ ಕುರಿತು ನೀಡಿದ ಉಪನ್ಯಾಸದ ಪೂರ್ಣಪಾಠ ಇಲ್ಲಿದೆ. ಕನ್ನಡದ ಸೇವೆ ವಿಷಯವಾಗಿ (1930 ರಲ್ಲಿ ಮೊದಲು ಪ್ರಕಟ ಹಾಗೂ 1944ರಲ್ಲಿ ಮರು ಪ್ರಕಟ) ಬೆಳಗಾವಿಯಲ್ಲಿ ಜರುಗಿದ (1929) ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ದೇಶದ ಸಂಸ್ಕೃತಿ ವಿಷಯದಡಿ ಕರ್ಣಾಟಕದ ಜನತೆಯ ಸಂಸ್ಖತಿ ಕುರಿತು ಮಾಡಿರುವ (ಮೊದಲು ಪ್ರಕಟ-1931, ಮರುಮುದ್ರಣ-1944) ಭಾಷಣ, ಪ್ರಬುದ್ಧ ಕರ್ಣಾಟಕ ಪತ್ರಿಕೆಯಲ್ಲಿ1937ರಲ್ಲಿ ಪ್ರಕಟವಾದ ಉಪನ್ಯಾಸ ’ಕರ್ಣಾಟಕ ಜಾನಪದ ಸಾಹಿತ್ಯ’ ಹಾಗೂ ಹೈದರಾಬಾದ್ ನಲ್ಲಿ (1941ರಲ್ಲಿ) ಜರುಗಿದ ಪ್ರಾಚ್ಯ ಸಮ್ಮೇಳನದ (ಕನ್ನಡ ವಿಭಾಗ) ಅಧ್ಯಕ್ಷೀಯ ಭಾಷಣ-ತಾಯ್ನುಡಿಯ ತಮ್ಮಡಿ, ಹಲವು ಭಾಷಣಗಳ ಲೇಖನಗಳ ಸಂಗ್ರಹ-ಪ್ರಸಂಗ (ಮೊದಲ ಮುದ್ರಣ-1943) ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.