ಬೆಂಗಳೂರು ಹಾಗೂ ಕಲಬುರಗಿ ಆಕಾಶವಾಣಿ ಮೂಲಕ ಬಿತ್ತರಗೊಳಿಸಿದ ಕವಿ ಹಾಗೂ ಲೇಖಕ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರ ಚಿಂತನೆಗಳ ಸಂಗ್ರಹ ಕೃತಿ-ಬಾಳಿಗೆ ಬುತ್ತಿ. ಭಾರತೀಯ ಸಂಸ್ಕೃತಿಯಲ್ಲಿ ಮಿಂದು ಹೋಗಿರುವ ನೈತಿಕ ಮಾರ್ಗ ಬಿತ್ತರಿಸುತ್ತವೆ. ಅಮೂಲ್ಯ ಸ್ನೇಹ ಹಾಗೂ ದೈನಂದಿನ ಕಷ್ಟಸುಖಗಳಲ್ಲಿ ಸ್ಪಂದಿಸುವ ಮನೋಭಾವ, ಗುಣ ನೋಡಿ ಗೆಳೆತನ ಮಾಡು, ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಇಂತಹ ನಾಣ್ನುಡಿಗಳು ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಾಥಮಿಕ ಶಿಕ್ಷಣವು ವ್ಯಕ್ತಿಯ ಪರಿಪೂರ್ಣ ವಿಕಾಸಕ್ಕೆ ಪೂರಕ. ಸ್ವಾವಲಂಬನೆ, ಕಾಯಕ, ನಿಷ್ಠೆ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಂತಿರಬೇಕು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಾದ ಶಿಕ್ಷಣ,ಸಂಘಟನೆ, ಹೋರಾಟ, " ಬಾಳಿಗೆ ಬುತ್ತಿ " ಚಿಂತನೆಗೆ ದಾರಿ ದೀಪಗಳು ಎಂದು ಹೇಳಿದ್ದಾರೆ. ಇನ್ನುಳಿದ ಚಿಂತನೆಯ ಚಿಲುಮೆಗಳು 'ಸುಖ ಶಾಂತಿಯ ' 'ಸುಖವೂ ಸುಡುವ ಬಿಸಿಲಿನಂತೆ ದುಃಖವು ಬೀದಿಯ ನೆರಳಿನಂತೆ' ಸುಖ-ದುಃಖ ಸಮಾನವಾಗಿ ಎದುರಿಸುವ ಮಾಧುರ್ಯತೆ ತೋರಿದ್ದಾರೆ. ಹೀಗೆ ವೈಚಾರಿಕತೆ, ಭಾರತ ಬಿಟ್ಟು ತೊಲಗಿ, ಅಪಘಾತಗಳು, ಡಾ.ಬಿ. ಆರ್. ಅಂಬೇಡ್ಕರರು, ಪ್ರಗತಿಪರ ರೈತರು, ಹಾಸ್ಯ, ಅನುತ್ತೀರ್ಣತೆ, ಮೌಲ್ಯಶಿಕ್ಷಣ, ಜೀವನೋತ್ಸಾಹ, ಕುಟುಂಬಗಳು, ಆತ್ಮವಿಶ್ವಾಸ, ಕೋಮುಸೌಹಾರ್ದತೆ, ಕನಸುಗಳು, ಒಳಗೊಂಡಂತೆ 25 ಬಿಡಿ ಚಿಂತನ ಬರಹಗಳು ಆಯಾ ಸಾಂದರ್ಭಿಕ ಮತ್ತು ಕಾಲಾವಧಿಗಳಿಗನುಗುಣವಾಗಿ ತಮ್ಮದೇ ಆಗಿರುವ ನಿಗದಿತ ಅವಧಿಗೆ ಕಾರ್ಯ ನಿರ್ವಹಿಸುವ ಶಕ್ತಿ ಚಿಂತನೆಯಲ್ಲಿ ಅಡಗಿದೆ.
©2024 Book Brahma Private Limited.