ಬೆಂಗಳೂರಿನಲ್ಲಿ ನಡೆದ ʻಸೌಹಾರ್ದ ಸಂಸ್ಕೃತಿ ಸಮಾವೇಶʼದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾಡಿದ ಆಶಯ ಭಾಷಣವೇ ʻದ್ವೇಶ ಬಿಟ್ಟು ದೇಶ ಕಟ್ಟುʼ ಕೃತಿ. ಮೊದಲ ಮುದ್ರಣದ ನಂತರ ಇದೀಗ ಬಂದ ಮರುಮುದ್ರಣದಲ್ಲಿ ಬರಗೂರು ಅವರು ಮಾಡಿದ್ದ ಭಾಷಣದಲ್ಲಿದ್ದ ಕೆಲವು ಹೊಸ ಅಂಶಗಳು, ಅವುಗಳ ವಿಸ್ತರಣೆಯನ್ನು ಸೇರಿಸಲಾಗಿದೆ. ದೇಶದೆಲ್ಲೆಡೆ ಧರ್ಮದ್ವೇಷ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ಸೌಹಾರ್ದ ಹರಡುವ ನಿಟ್ಟಿನಲ್ಲಿ ದೇಶ ಕಟ್ಟುವ ತಮ್ಮ ಆಶಯಗಳನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
©2025 Book Brahma Private Limited.