ಡಾ. ವೀರೇಶ ಬಡಿಗೇರ ಅವರ ಸಂಪಾದಿತ ಕೃತಿ ’ಪಂಚಾನನ’. ಈ ಕೃತಿಯು ಹೇಳತೇನ ಕೇಳ ಆನ್ ಲೈನ್ ಉಪನ್ಯಾಸ ಸರಣಿಯನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಕೆ. ಆರ್ ಬಡಿಗೇರ ಅವರು, ‘ಕೊರೋನಾ ಸಮಯ ವ್ಯಕ್ತಿಗಳ ಮನ ಕಳವಳಗೊಳಿಸಿತು. ಕುಟುಂಬಗಳ ಶಾಂತಿ ಹಾಳು ಮಾಡಿತು ಹಾಗೂ ಇಡೀ ಸಮಾಜದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅಂತಹ ಸಮಯದಲ್ಲಿ ಇಡೀ ಸಮಾಜಕ್ಕೆ ಚೈತನ್ಯ ತುಂಬುವ ಒಂದು ಹೊಸ ಕಲ್ಪನೆ ಹಂಪಿಯ ಕನ್ನಡ ವಿ.ವಿ. ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಅವರಿಗೆ ಮೂಡಿತು. ಅದುವೇ “ ಹೇಳತೇನ ಕೇಳ” ಕಾರ್ಯುಕ್ರಮ. ಕಳೆದ ಒಂದು ವರ್ಷದಿಂದ ಪ್ರತಿ ಭಾನುವಾರ ನಿರಂತರವಾಗಿ ಈ ಉಪನ್ಯಾಸ ಮಾಲೆ ಅಂತರ್ಜಾಲದಲ್ಲಿ ಮೂಡಿಬರುತ್ತಿವೆ. ಉಪನ್ಯಾಸಕ್ಕೆ ಆಯ್ದುಕೊಂಡಿರುವ ವಿಷಯಗಳು ಎಲ್ಲರಿಗೂ ಆಸಕ್ತಿ ಮೂಡಿಸುವಂಥವು. ಶರಣರ ಜೀವನ ಚರಿತ್ರೆ, ವಿಶ್ವಕರ್ಮ ಜನಾಂಗದ ಸಂಸ್ಕೃತಿ, ಸಮಾಜಕ್ಕೆ ಈ ಜನಾಂಗ ನೀಡಿದ ಕೊಡುಗೆ , ಸಂಶೋಧನಾತ್ಮಕ ಮತ್ತು ಸಾಹಿತ್ಯಿಕ ಹಾಗೂ ಸದ್ಯದ ಪರಿಸ್ಥಿತಿಯ ಸಮಸ್ಯೆಗಳು ಸೇರಿದಂತೆ ಹಲವಾರು ವಿಷಯಗಳು ಸರಣಿಯಲ್ಲಿ ಮೂಡಿಬಂದಿವೆ. ಈ ಹೇಳತನ ಹೇಳ ಕಾರ್ಯಕ್ರಮ ಒಂದು ಉತ್ತಮ ಕಾರ್ಯವಾಗಿದ್ದು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ. ಆದುದರಿಂದ ಇದು ಕೊರೊನಾ ನಂತರವು ನಿರಂತರವಾಗಿ ನಡೆಯಬೇಕೆಂಬ ಆಶಯವಿದೆ. ಇಂತಹ ಉಪಯುಕ್ತ ವಿಚಾರ ಹಂದರವನ್ನು ಸಮಾಜ ಬಂಧುಗಳು ಬೆಂಬಲಿಸಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2024 Book Brahma Private Limited.