ಕನ್ನಡ ಸಂಶೋಧನಾ ಸಮಿತಿಯ ಆಹ್ವಾನದ ಮೇರೆಗೆ ಹಳೆಗನ್ನಡ ಸಾಹಿತ್ಯ ಸಂಶೋಧನಾತ್ಮಕತೆ ಕುರಿತು ಮಾತನಾಡಲು ಧಾರವಾಡಕ್ಕೆ ಆಗಮಿಸಿದ್ದ ಎಂ. ಗೋವಿಂದ ಪೈ ಅವರ ಉಪನ್ಯಾಸಗಳನ್ನು ಪ್ರಕಟಿಸಿದ ಕೃತಿ ಇದು. ಮೊದಲನೇ ಉಪನ್ಯಾಸವು ರನ್ನನ ಪರಶುರಾಮ ಚರಿತದ ಹಾಗೂ ಚಕ್ರೇಶ್ವರ ಚರಿತದ ಕಥೆ ಕುರಿತು ಜಿಜ್ಞಾಸೆ, ಎರಡನೆಯದರಲ್ಲಿ-ಬಸವಣ್ಣನ ಕಾಲ ನಿರ್ಣಯ; ಕನ್ನಡ ಸಾಹಿತ್ಯದಲ್ಲಿ ವಚನ ಕಾವ್ಯದ ಹೊಸ ಹಾದಿ ಹಾಗೂ ಶರಣರ ಬರವಣಿಗೆಗೂ ತಕ್ಕಂತೆ ಹೆದ್ದಾರಿ ನಿರ್ಮಿಸಿದಾತ ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯದಲ್ಲಿ ಬಸವಣ್ಣನಿಗೆ ಉನ್ನತ ಸ್ಥಾನ ಹಾಗೂ ಮೂರನೇ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನ ನೆಲೆಯನ್ನು ಕ್ರಿ.ಶ. 3ನೇ ಶತಮಾನದವರೆಗೂ ಶೋಧಿಸಿದೆ. ಈ ಮೂರು ಉಪನ್ಯಾಸಗಳು ವಿದ್ವತ್ ಪೂರ್ಣವಾಗಿದ್ದು, ಸಂಶೋಧನೆಗೆ ಉತ್ತಮ ಆಕರಗಳಾಗಿವೆ.
©2025 Book Brahma Private Limited.