ಕಡಲ ತಡಿಯಿಂದ ಹೈಮಾಚಲದಡಿಗೆ

Author : ಕೋ. ಚೆನ್ನಬಸಪ್ಪ

₹ 115.00




Year of Publication: 1970
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಕಡಲ ತಡಿಯಿಂದ ಹೈಮಾಚಲದಡಿಗೆʼ ಭಾಷಣಗಳ ಸಂಕಲನ ಹಾಗೂ ಜೀವನ ಚಿತ್ರಣದ ಪುಸ್ತಕವನ್ನು ಲೇಖಕ ಕೋ. ಚೆನ್ನಬಸಪ್ಪ ಅವರು ರಚಿಸಿದ್ದಾರೆ. ಚಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಕೊಲಂಬೋದಲ್ಲಿ ಬಂದಿಳಿದ ಸ್ವಾಮಿ ವಿವೇಕಾನಂದರು, ಕೊಲಂಬೋದ ಕಡಲ ತಡಿಯಿಂದ ಹಿಮಾಲಯದ ಮುಡಿ ಅಲ್ಮೋರಾ ತಲಪುವವರೆಗೆ ತಮ್ಮ ಸಿಡಿಲಕಂಠದಲ್ಲಿ ಮಾಡಿದ, ನೂರು ವರ್ಷಗಳಷ್ಟು ಹಿಂದಿನ ಅತ್ಯಮೋಘವಾದ ಚಿರಸ್ಮರಣೀಯ ಭಾಷಣಗಳ ನವೀನ ಜೋಡಣೆ. ನಮ್ಮ ಆವಶ್ಯಕತೆಗಳು ನಿಜಕ್ಕೂ ಏನು ಎಂಬುದರತ್ತ ಸ್ವಾಮೀಜಿಗಳ ದಿವ್ಯ ಚಿಂತನೆಗಳು ಈ ಪುಸ್ತಕದಲ್ಲಿವೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Related Books