ಬಾನುಲಿದ ಬೇಂದ್ರೆ ಬೆರಗು

Author : ಸಿ. ಯು. ಬೆಳ್ಳಕ್ಕಿ

Pages 52

₹ 40.00




Year of Publication: 2019
Published by: ಶ್ರೀಮಾತಾ ಪ್ರಕಾಶನ
Address: ಅಂಬಿಕಾತನಯದತ್ತ ವೇದಿಕೆ, ವಿಶ್ವಶ್ರಮ ಚೇತನ, ಗೋಕುಲ ರಸ್ತೆ, ಹುಬ್ಬಳ್ಳಿ - 580030

Synopsys

‘ಬಾನುಲಿದ ಬೇಂದ್ರೆ ಬೆರಗು’ ಬೇಂದ್ರೆ ಬಾನುಲಿ ಸಾಹಿತ್ಯದ ಸಪ್ತವರ್ಣ ದರ್ಶನ. ಈ ಹೊತ್ತಿಗೆಯ ಮುಖಪುಟದಲ್ಲಿ ಬೇಂದ್ರೆಯವರ ಭಾವಚಿತ್ರದ ಜೊತೆ ರೇಡಿಯೋ ನೋಡುತ್ತೀರಿ. ಅದು ಬೇಂದ್ರೆ ಜೀವನ ಪರ್ಯಂತ ಅವರ ಸಂಗಾತಿಯಾದುದು. ಸಾಧನಕೇರಿಯ 'ಶ್ರೀಮಾತಾ'ದಲ್ಲಿ ಅದು ಇಂದಿಗೂ ಇದೆ. ತನ್ನ ಪಕ್ಕದಲ್ಲಿ ಬೇಂದ್ರೆ ಇಲ್ಲದಿರುವ ಹಳಹಳಿ ಅದಕ್ಕೂ ಇರಬಹುದು. ಇದು ಬಾನುಲಿಯೊಂದಿಗಿನ ಅವರ ಅವಿನಾಭಾವದ ಸಂಬಂಧ ಹೇಳುತ್ತಿದೆ. ಬೇಂದ್ರೆ ಒಬ್ಬ ಅಪ್ಪಟ ಬಾನುಲಿ ಪ್ರಸಾರಕ ಕೂಡ ಆಗಿದ್ದರು. ಹತ್ತು ವರ್ಷ ಸಲಹಾಗಾರರಾಗಿ ಅವರ ಸೇವೆ ಆಕಾಶವಾಣಿಗೆ ಸ೦ದಿದೆ . ಬಹಳಷ್ಟು ಜನಕ್ಕೆ ಬಾನುಲಿಯೊಂದಿಗಿನ ಅವರ ನಿರಂತರದ ಒಡನಾಟ, ಬಾನುಲಿ ಮಾಧ್ಯಮಕ್ಕೆ ಅವರ ಕೊಡುಗೆ ಇವು ಅವರ ವ್ಯಕ್ತಿತ್ವದ ಅಪರಿಚಿತ ಮುಖ. `ಬಾನುಲಿದ ಬೇಂದ್ರೆ ಬೆರಗು' ಈ ಅಪರಿಚಿತ ಮುಖವನ್ನು ಅನಾವರಣಗೊಳಿಸುತ್ತಿದೆ. ಈ ಕೃತಿಯ ಲೇಖಕ ಸಿ.ಯು.ಬೆಳ್ಳಕ್ಕಿ ಅವರು ಆಕಾಶವಾಣಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಾನುಲಿ ಪ್ರಸಾರಕ, ಮಾಧ್ಯಮ ಲೇಖಕ, ಹಾಗೂ ವಿಶ್ರಾಂತ ಆಕಾಶವಾಣಿ ನಿರ್ದೆಶಕರು. ನೂರಾರು ಸೃಜನಾತ್ಮಕ, ವಿನೂತನ ಕಾರ್ಯಕ್ರಮಗಳನ್ನು ನಿರೂಪಿಸಿದ ಕ್ರಿಯಾಶೀಲರು. “ಬೇಂದ್ರೆ ಬಾನುಲಿ ಸಾಹಿತ್ಯದ ಸಪ್ತ ವರ್ಣ ದರ್ಶನ- ಬಾನುಲಿದ ಬೇಂದ್ರೆ ಬೆರಗು, ಬೇಂದ್ರೆಯವರು 'ಬಾನುಲಿ ಸಾಹಿತ್ಯ'ಕ್ಕೆ ನೀಡಿರುವ ವಿಶೇಷ ಕೊಡುಗೆಯ ಮಾಹಿತಿ ನೀಡುತ್ತದೆ..

About the Author

ಸಿ. ಯು. ಬೆಳ್ಳಕ್ಕಿ

ಆಕಾಶವಾಣಿಯಲ್ಲಿ ವೃತ್ತಿನಿರತರಾಗಿದ್ದ ಸಿ.ಯು. ಬೆಳ್ಳಕ್ಕಿಯವರು ಪ್ರವೃತ್ತಿಯಲ್ಲಿಯೂ ಮಾಧ್ಯಮವನ್ನು ಪ್ರೀತಿಸಿದವರು. ಧ್ವನಿ ಮಾಧ್ಯಮದ ನೂರು ಸಾಧ್ಯತ್ಯೆಗಳ ಬಗ್ಗೆ ಪ್ರಯೋಗಶೀಲರಾಗಿದ್ದಾಗಲೇ ಗಾಳಿಯಲ್ಲಿ ತೇಲಿದ  ಮಾತುಗಳನ್ನು ಅಕ್ಷರರೂಪದಲ್ಲಿ ದಾಖಲಿಸಿದವರು. ಅನೇಕ ಪ್ರಸಾರಕರನ್ನು ಮಾರ್ಗದರ್ಶನ ನೀಡಿ ಬೆಳೆಸಿದರು. ಬಾನುಲಿಯ ಕುರಿತಾಗಿ ಕನ್ನಡದಲ್ಲಿ ಇವರಷ್ಟು ನಿರಂತರವಾಗಿ ಬರೆಯುತ್ತಾ ಬಂದವರು ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಂತೆಯೇ ಬಾನುಲಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಅಭಿವ್ಯಕ್ತಿ ಬೆಳೆಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ವಿಶ್ರಾಂತ ಬದುಕಿನಲ್ಲೂ ವೃತ್ತಿಯ ನಂಟನ್ನು ನಿರ್ಲಕ್ಷಿಸದೆ ಮಾತಿನ ಮನೆಯ ಬೆರಗನ್ನು ಕೇಳುವ ಕೌತುಕವಾಗಿ ಲಿಪಿಬದ್ಧಗೊಳಿಸಿದ್ದಾರೆ. ಅಲ್ಲದೇ ಮಾಧ್ಯಮಲೋಕದ ಕುರಿತಾಗಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books