ಪ್ರಸಿದ್ಧ ವಿಮರ್ಶಕ, ಕಾರಂತ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿದ ಎಸ್. ಅನಂತ ನಾರಾಯಣ ಅವರು 1989ರಲ್ಲಿ ’ಶಿವರಾಮ ಕಾರಂತ ದತ್ತಿ ನಿಧಿ’ಯಡಿ ಆಯೋಜಿಸಿದ್ದ ಸಮಾರಭದಲ್ಲಿ ಪ್ರಥಮ ಉಪನ್ಯಾಸ ನೀಡಿದ ವಿಷಯ ’ ಕಾರಂತರ ಕಾದಂಬರಿಗಳಲ್ಲಿ ನಿಸರ್ಗ’. ದಕ್ಷಿಣ ಕನ್ನಡ ಜಿಲೆಯನ್ನು ಸಾಹಿತ್ಯದಲ್ಲಿ ಜೀವಂತವಾಗಿ ಮೂಡಿಸಿದ ಕಾರಂತರ ಬಗೆಗೆ, ಅವರಿಗೆ ನಿಕಟವಾದ ನಿಸರ್ಗದ ಕುರಿತಿರುವ ಪ್ರೀತಿಯನ್ನು ಇಲ್ಲಿ ವಿವರಿಸುತ್ತಾರೆ. ಈ ಕೃತಿಯಲ್ಲಿ ಮುಖ್ಯವಾಗಿ ’ ಮರಳಿ ಮಣ್ಣಿಗೆ’ ’ ಬೆಟ್ಟದ ಜೀವ’ ಹಾಗೂ ’ ಕುಡಿಯರ ಕೂಸು’ ಕಾದಂಬರಿಗಳ ವಿಮರ್ಶೆ ಬಂದಿದೆ. ಚೋಮನದುಡಿ, ಸರಸಮ್ಮನ ಸಮಾಧಿ, ಶನೀಶ್ವರನ ನೆರಳಲ್ಲಿ, ಚಿಗುರಿದ ಕನಸು, ಮುಗಿದಯುದ್ಧ, ಅಳಿದ ಮೇಲೆ ಕಾದಂಬರಿಗಳ ಉಲ್ಲೇಖಗಳನ್ನು ನೀಡಿದ್ದಾರೆ. ಶಿವರಾಮ ಕಾರಂತರ ಸ್ಮೃತಿ ಪಟಲದಿಂದ ಮತ್ತು ಹುಚ್ಚು ಮನಸ್ಸಿನ ಹತ್ತು ಮುಖಗಳು-’ ಆತ್ಮ ಕಥನ’ ಕೃತಿಗಳಿಂದಲೂ ಪೂರಕವಾಗಿ, ಕಾರಂತರ ಮಾತುಗಳನ್ನೇ ಮತ್ತೇ ನೆನಪಿಸುತ್ತದೆ-ಈ ಕೃತಿ.
©2024 Book Brahma Private Limited.