ಕಾಂತಾವರ ಕನ್ನಡ ಸಂಘದ ನುಡಿಹಾರ ಸರಣಿ ಕೃತಿಯ ಒಂಬತ್ತನೇ ಕೃತಿ ನುಡಿಹಾರ-9. ಕಾಲದಿಂದ ಕಾಲಕ್ಕೆ ನಡೆಯಬೇಕಾದ ಈ ಮರು ಓದು ಸಮಕಾಲೀನ ದೃಷ್ಟಿಕೋನದ ಹೂರಣದಿಂದಾಗಿರುತ್ತದೆ. ಕನ್ನಡ ಕಾವ್ಯದ ನಡೆಯಲ್ಲಿ ಅಂದಂದಿನ ಕೊಡುಕೊಳ್ಳುವಿಕೆಯನ್ನು ಇಂದಿನ ಓದುಗ ಗ್ರಹಿಸುವ ರೀತಿ ಬೇರೆಯೇ ಆಗಿರುತ್ತದೆ. ಇಂತಹ ಓದು ಸಮಕಾಲೀನ ಸಂದರ್ಭಗಳಲ್ಲಿ ಆಯಾ ಕೃತಿಗಳನ್ನು ಮತ್ತೆ ಓದುಗರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇಂಥಹ ವಿಶೇಷ ಓದನ್ನು ಈ ಕೃತಿ ಮರುಸೃಷ್ಟಿಸುತ್ತದೆ.
ಕೃತಿಯಲ್ಲಿ ಬೆಟಗೇರಿ ಕೃಷ್ಣಶರ್ಮರ ಕಾವ್ಯದ ಹೊಸ ಓದು- ಡಾ.ಬಿ.ಪಿ. ಸಂಪತ್ ಕುಮಾರ್, ಮಂಜೇಶ್ವರ ಗೋವಿಂದ ಪೈ ಅವರ ಕಾವ್ಯದ ಮರು ಓದು ಸದಾನಂದ ಪೆರ್ಲ, ಲಂಕೇಶರ ಕವಿತೆಗಳು- ಡಾ. ರಾಜಶೇಖರ ಹಳೆಮನೆ, ಹೆಚ್.ಎಸ್. ವೆಂಕಟೇಶಮೂರ್ತಿಯವರ ಕಾವ್ಯದ ಹೊಸ ಓದು- ರಾಘವೇಂದ್ರ ಪಾಟೀಲ, ಡಾ. ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯದ ಮರು ಓದು- ಡಾ. ಸುಲತಾ ವಿದ್ಯಾಧರ್, ಮೂಡಬಿದ್ರೆ, ಡಾ. ಚೆನ್ನವೀರ ಕಣವಿ ಅವರ ಕಾವ್ಯದ ಮರು ಓದು- ಶ್ರೀಮತಿ ಸುಧಾರಾಣಿ, ಸು.ರಂ. ಎಕ್ಕುಂಡಿ ಅವರ ಕಾವ್ಯದ ಮರು ಓದು- ಸತ್ಯನಾರಾಯಣ ಮಲ್ಲಿಪಟ್ಲ, ಪೇಜಾವರ ಸದಾಶಿವರಾವ್ ಅವರ ಕಾವ್ಯದ ಮರು ಓದು- ಡಾ. ಆರ್. ನರಸಿಂಹಮೂರ್ತಿ ಮಂಗಳೂರು, ಡಾ. ಎ.ಕೆ. ರಾಮಾನುಜನ್ ಅವರ ಕಾವ್ಯಾಭಿವ್ಯಕ್ತಿ- ಡಾ. ವೇಣುಗೋಪಾಲ ಶೆಟ್ಟಿ, ಸೇರಿದಂತೆ ಹಲವು ಮಹತ್ವದ ಕೃತಿಗಳ ಮರು ಓದು, ವಿಶ್ಲೇಷಣೆಗಳಿವೆ.
©2024 Book Brahma Private Limited.