ಕಾಂತಾವರ ಕನ್ನಡ ಸಂಘ ಹಲವು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಅದರ ಭಾಗವಾಗಿ ನುಡಿಹಾರ ಸರಣಿ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಆ ಸರಣಿ ಕೃತಿಗಳ ಸಾಲಿನಲ್ಲಿ ಪ್ರಕಟವಾದ ಕೃತಿ ’ನುಡಿಹಾರ-”.
ನುಡಿಹಾರ ಸರಣಿ ಕೃತಿಗಳನ್ನು ಸಂಪಾದಿಸಿರುವ ಲೇಖಕ ಅರುಣಕುಮಾರ್ ಎಸ್.ಆರ್, ಕೃತಿಯಲ್ಲಿ ಗೋಪಾಲಕೃಷ್ಣ ಅಡಿಗ- ವ್ಯಕ್ತಿ ಮತ್ತು ಕಾವ್ಯ- ಎಸ್. ದಿವಾಕರ್, ಬೇಂದ್ರೆಯವರ ‘ಪ್ರೀತಿ’ ಭಾವಗೀತೆಯಾದ ಬಗೆ- ಶ್ಯಾಮಸುಂದರ ಬಿದರಕುಂದಿ, ಕುವೆಂಪು ಕಾವ್ಯದ ಮರು ಓದು- ಡಾ. ಶ್ರೀಕಂಠ ಕೂಡಿಗಿ, ನಿಸಾರ್ ಅಹಮದ್ ಅವರ ಕವನಗಳ ಮರು ಓದು- ನಾ. ದಾಮೋದರ ಶೆಟ್ಟಿ, ಚಂಪಾ ಎಂಬ ಕಿಡಿ- ಪ್ರೊ. ಧರಣೇಂದ್ರ ಕುರಕರಿ, ಸಿದ್ಧಲಿಂಗಯ್ಯನವರ ಕಾವ್ಯದ ಹೊಸ ಓದು- ಡಾ. ಟಿ.ಯಲ್ಲಪ್ಪ, ತೀವ್ರ ಭಾವ ಶಕ್ತಿಯನ್ನೇ ನೆಚ್ಚಿದ ಕಾವ್ಯ- ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯದ ಹೊಸ ಓದು- ಸುಬ್ರಾಯ ಚೊಕ್ಕಾಡಿ, ಕೆ.ಎಸ್. ನರಸಿಂಹಸ್ವಾಮಿ - ಹೊಸ ಓದು- ಡಾ.ಟಿ.ಎ. ಬಾಲಕೃಷ್ಣ ಅಡಿಗ ಸೇರಿದಂತೆ ಹಲವು ಮಹತ್ವದ ಲೇಖಕರ ಕೃತಿ ಮತ್ತು ವಿಚಾರಗಳ ಬಗ್ಗೆ ಹಿರಿಯ ಲೇಖಕರ ಅಭಿಪ್ರಾಯ ವಿಶ್ಲೇಷಣೆಗಳಿವೆ.
©2024 Book Brahma Private Limited.