‘ಫ್ರೆಗ್ರನ್ಸ್ ಆಫ್ ಗ್ವಾವ’ ಎಸ್.ಗಂಗಾಧರಯ್ಯ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಇಲ್ಲಿನ ಈ ಮಾತುಕತೆ ಓದುಗರು ಹಾಗೂ ಲೇಖಕರೊಳಗಿನ ಈ ತನಕದ ಸಾಹಿತ್ಯದ ಹಲವು ನಂಬಿಕೆಗಳನ್ನು ಮರು ಚಿಂತನೆಗೆ ಹಚ್ಚುತ್ತದೆ. ಸೃಜನಶೀಲತೆ ಎಂಬ ಖಾಸಗಿ ಮೂಸೆಯಲ್ಲಿ ಸ್ಪಟಿಸುವ ವಿಸ್ಮಯ ಇಲ್ಲಿ ಹೊಸದೊಂದು ಮಗ್ಗುಲನ್ನು ಅನಾವರಣಗೊಳಿಸಿದೆ. ಬರವಣಿಗೆ ಎಂಬ ಸೃಜನಶೀಲ ಬದುಕಿನಲ್ಲಿ ಬಾಲ್ಯ ಎಷ್ಟು ಮುಖ್ಯ ಎಂಬುದನ್ನು ತೋರಾಕುತ್ತಲೇ ಅದು ಸ್ಮೃತಿಯ ಒಂದು ಅಂಶವಾಗಿ ಬರವಣಿಗೆಯಲ್ಲಿ ವಿಸ್ಕೃತಗೊಂಡರೂ ವರ್ತಮಾನದ ಸತ್ಯಗಳಿಗೆ ಮುಖಾಮುಖಿಯಾಗಬೇಕಾದ ತುರ್ತನ್ನು ಮನಗಾಣಿಸುತ್ತದೆ. ಅಂಥ ಚಣಗಳಲ್ಲಿ ಲೇಖಕರು ರೂಪುಗೊಳ್ಳುವ ಬಗೆ, ಅವರು ಅನುಭವಿಸುವ ತಲ್ಲಣಗಳು, ಹೊರಬೇಕಾಗುವ ಸಾಮಾಜಿಕ ಜವಾಬ್ದಾರಿಗಳನ್ನು ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಅವರು ಕಾಪಾಡಿಕೊಂಡ ಮನುಕುಲದ ಬಗೆಗಿನ ಕಾಳಜಿಗಳು, ಅನುಭವದ ಒಳನೋಟಗಳು ಓದುಗರೊಳಗೆ ಹೊಸ ಬಗೆಯ ಸಂವೇದನೆಯನ್ನು ಹುಟ್ಟಾಕಬಲ್ಲ ಅಚ್ಚರಿಗೆ ಇದು ಸಾಕ್ಷಿಯಾಗುತ್ತದೆ. ಇದರ ಜೊತೆಗೆ ಲೇಖಕರಾದವರೊಳಗೆ ಸಾಮಾಜಿಕ ಬದ್ಧತೆ ಹಾಗೂ ಸೃಜನಶೀಲ ಬದುಕಿನಲ್ಲಿ ಕಲಾತ್ಮಕತೆಯನ್ನು ನಿಭಾಯಿಸುವಿಕೆಯ ಕುರಿತ ಪರಿಣಾಮಕಾರಿ ಮಾತುಗಳಿವೆ. ಅದೇ ರೀತಿ ಲೇಖಕರು ನಂಬಿದ ಸಿದ್ಧಾಂತಗಳು, ಅವುಗಳನ್ನು ಕಡೆತನಕ ಜತನ ಮಾಡಿಕೊಳ್ಳಲು ಬೇಕಾದ ಮನೋಸ್ಥಿತಿ, ನಿಜ ಲೇಖಕರು ಸಾಮಾಜಿಕ ಚಲನೆಯಲ್ಲಿ ಸಮಾಜಮುಖಿಯಾಗದೆ ಉಳಿಯಲು ಸಾಧ್ಯವೇ ಇಲ್ಲ, ಹಾಗೆ ಉಳಿಯುವವರು ಜೀವ ವಿರೋಧಿ ಮನೋಸ್ಥಿತಿಯವರಾಗಿರುತ್ತಾರೆ ಎಂಬುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
©2025 Book Brahma Private Limited.