ದರ್ಶನ ಸರಸ್ವತಿ

Author : ಶಭಾನ

Pages 99

₹ 80.00




Year of Publication: 2022
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

‘ದರ್ಶನ ಸರಸ್ವತಿ’ ಪುಸ್ತಕವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪುಸ್ತಕ ಮಾಲಿಕೆಯಡಿ ಪ್ರಕಟಗೊಂಡಿದೆ. ಈ ಪುಸ್ತಕದಲ್ಲಿ ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ಸ್ವೀಕೃತರ ಭಾಷಣಗಳಿವೆ. ಈ ಎಂಟೂ ಭಾಷಣಗಳು ಜ್ಞಾನಪೀಠ ಪ್ರಶಸ್ತಿ ಸ್ವೀಕಾರ ಸಂದರ್ಭದ ಭಾಷಣಗಳಾಗಿರುವುದು ಈ ಪುಸ್ತಕದ ವಿಶೇಷ. ಕನ್ನಡಿಗರಿಗೆ ಈವರೆಗೆ ದುರ್ಲಭವಾಗಿದ್ದ ಜ್ಞಾನಪೀಠ ಸಂದರ್ಭದ ಕನ್ನಡದ ಸಾಹಿತಿಗಳ ಭಾಷಣಗಳು ಇಲ್ಲಿದ್ದು ಈ ಎಂಟೂ ಭಾಷಣಗಳು ಆಯಾ ಸಾಹಿತಿಗಳ ಸಮಗ್ರ ಅರಿವನ್ನು ಎರಕಹೊಯ್ದಂತಿದ್ದು ಕನ್ನಡ ಸಾಹಿತ್ಯದ ಪ್ರಮುಖ ದಾಖಲೆಯೂ ಆಗುತ್ತವೆ. ಈ ಭಾಷಣಗಳ ಜೊತೆಗೆ ಜ್ಞಾನಪೀಠ ಪ್ರಶಸ್ತಿಯು ರೂಪುಗೊಂಡ ಬಗೆ, ಜ್ಞಾನಪೀಠದ ಪ್ರಶಸ್ತಿಯ ಪರಂಪರೆ, ಆಯ್ಕೆ ಸಮಿತಿಯ ಬಗ್ಗೆ ಈ ತಿಳಿಯಲು ಈ ಪುಸ್ತಕವು ಪ್ರಮುಖ ಆಕರವಾಗಿದೆ.

About the Author

ಶಭಾನ

ಯುವ ಲೇಖಕಿಯಾದ ಶಭಾನ ಮೈಸೂರು, ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದವರು. ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅರವಿಂದ ಮಾಲಗತ್ತಿ ಅವರ ಮಾರ್ಗದರ್ಶನದಲ್ಲಿ ಪೂರ್ಣಕಾಲಿಕ ಸಂಶೋಧನೆ ನಡೆಸುತ್ತಿದ್ದಾರೆ. ಬೇಂದ್ರೆ ಕಾವ್ಯ ಕೂಟ(ನೋಂ.)ದ ಬಹುಮಾನವನ್ನೂ ಒಳಗೊಂಡಂತೆ ಇತರ ಬಹುಮಾನಗಳನ್ನು ಪಡೆದಿರುವ ಇವರು ಸಮಾಜಮುಖಿ, ಸಂಗಾತ, ಆಂದೋಲನ ಸೇರಿದಂತೆ ಇತರ ನಿಯತಕಾಲಿಕೆಗಳಲ್ಲಿ ಬರೆಹಗಳನ್ನು, ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಹೊಸತಲೆಮಾರಿನ ಕಥೆ-ಕಾವ್ಯದಲ್ಲಿ ವಿಶೇಷ ಅಧ್ಯಯನ ಮತ್ತು ಆಸಕ್ತಿ ಹೊಂದಿರುವ ಇವರ ಮೊದಲ ಸಂಪಾದಿತ ಪುಸ್ತಕ ‘ದರ್ಶನ ಸರಸ್ವತಿ’ಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ...

READ MORE

Related Books