‘ಚಿನ್ನುಡಿ’-ಭಾಷಣ, ಲೇಖನ ಇತ್ಯಾದಿ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೃತಿ. ಈ ಕೃತಿಗೆ ಪ್ರೊ.ಬಸವರಾಜ ಕಲ್ಗುಡಿ ಅವರ ಬೆನ್ನುಡಿ ಬರಹವಿದೆ. ‘ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಚಿಂತನೆಯ ಕೇಂದ್ರದಲ್ಲಿ ಕನ್ನಡ ಸಮುದಾಯದ ಸಂಸ್ಕೃತಿಯು ತಳೆಯಬೇಕಾದ ಸಮ ಸಮುದಾಯದ ಆಶಯಗಳ ತುಡಿತವು ಪ್ರಧಾನವಾಗಿ ಎದ್ದು ಕಾಣುತ್ತದೆ. ಜಾತಿಯಿಂದ ಉಂಟಾಗಿರುವ ಶ್ರೇಣೀಕರಣ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಿರುವ ಈ ಅನಾರೋಗ್ಯಕರ ಸ್ಥಿತಿಯನ್ನು ಚಿನ್ನಸ್ವಾಮಿಯವರ ಮಾತುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅಂಬೇಡ್ಕರ್ ಚಿಂತನೆ, ಲೋಹಿಯಾವಾದಿ. ಪರಿಕಲ್ಪನೆ ಹಾಗೂ ವಚನ ಚಳುವಳಿಯು ರೂಪಿಸಿದ ಸಾಮಾಜಿಕ, ಆರ್ಥಿಕ ತಾತ್ವಿಕತೆಗಳು, ಚಿನ್ನಸ್ವಾಮಿಯವರ ಚಿಂತನೆಯಲ್ಲಿ ಒಂದಕ್ಕೊಂದು ಪರಿಣಾಮಕಾರಿಯಾದ ಸಾಂಗತ್ಯವನ್ನು, ಹೊಸ ಒಳನೋಟಗಳನ್ನು ರೂಪಿಸಿವೆ’ ಎಂದಿದ್ದಾರೆ.
©2025 Book Brahma Private Limited.