ಭಾರತಕ್ಕೆ ಸ್ವಾತಂತ್ಯ್ರ ಬಂದಿದ್ದು ಹಾಗೂ ಗಾಂಧೀಜಿಯನ್ನುಹತ್ಯೆ ಮಾಡಿದ್ದು ಈ ಎರಡು ಸಂದರ್ಭಗಳು ದೇಶದಲ್ಲಿ ಬಹುಚರ್ಚಿತ ಸಂಗತಿಗಳಾಗಿದ್ದರಿಂದ ತಮಗೆ ಸಭೆ-ಸಮಾರಂಭಗಳಲ್ಲಿ ಮಾತನಾಡಲು ಮಹನೀಯರು ಆಹ್ವಾನಿಸಿದ ಮೇರೆಗೆ ಅಲ್ಲಲ್ಲಿ ಭಾಷಣಗಳನ್ನು ಮಾಡಿದ್ದು, ಅವುಗಳ ಸಂಗ್ರಹವೇ ‘ಮಹಾತ್ಮರ ಮರಣ ಮತ್ತು ಇತರ ಉಪನ್ಯಾಸಗಳು’ ಎಂದು ಲೇಖಕ ಜೆ.ಪಿ.ರಾಜರತ್ನಂ ಅವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಮಹಾತ್ಮರ ಮರಣ, ಜನತಾ ರಾಜ್ಯದ ಭಾರ, ಖಾದೀ ಕಾಷಾಯ, ಹಿಂದೆ ಉರುಳಿದ ಚಕ್ರ ಹೀಗೆ ಒಟ್ಟು 14 ಉಪನ್ಯಾಸಗಳನ್ನು ಇಲ್ಲಿ ಸಂಕಲಿಸಲಾಗಿದೆ. ಈ ಪೈಕಿ ಬಹುತೇಕ ಭಾಷಣಗಳು ಜೀವನ, ಪ್ರಜಾಮತ, ವಿಶ್ವಕರ್ಣಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
©2024 Book Brahma Private Limited.