ಭಾಷಣ ಕಲೆ ಮತ್ತು ಸಂಭಾಷಣ ಕಲೆ

Author : ಜಿ.ಎಂ. ಕೃಷ್ಣಮೂರ್ತಿ

Pages 196

₹ 100.00




Year of Publication: 2011
Published by: ಸುಧಾ ಎಂಟರ್ ಪ್ರೈಸಸ್

Synopsys

ಜಿ. ಎಂ.ಕೃಷ್ಣಮೂರ್ತಿ ಅವರ ಕೃತಿ ಭಾಷಣ ಕಲೆ ಮತ್ತು ಸಂಭಾಷಣ ಕಲೆ. ಸಂಭಾಷಣೆ ಎನ್ನುವುದು ಗೊಡ್ಡುಹರಟೆ ಆಗಬೇಕಾಗಿಲ್ಲ. ಭಾಷಣ ಎನ್ನುವುದು ತಲೆಚಿಟ್ಟು ಹಿಡಿಸುವ ಮಾತುಗಾರಿಕೆ ಆಗಬೇಕಾಗಿಲ್ಲ. ಸರಸ ಸನ್ನಿವೇಶದಲ್ಲಿ ಸಮಾಧಾನದಿಂದ ಇತರರ ಮಾತನ್ನು ಕೇಳಿಸಿಕೊಳ್ಳುತ್ತಾ ತಮ್ಮ ಮಾತನ್ನು ಸೇರಿಸುತ್ತಾ ನುಡಿಕೊಂಡಿಗಳನ್ನು ಸೇರಿಸುತ್ತಾ ಹೋದರೆ ಸಂಭಾಷಣೆ ಅಪ್ಯಾಯಮಾನವಾಗುತ್ತದೆ. ಭಾಷಣಕಾರ ಸಭಿಕರಲ್ಲಿ ಕುತೂಹಲವನ್ನು ಕೆರಳಿಸುತ್ತ, ಚಿಂತನೆಯನ್ನು ಅರಳಿಸುತ್ತ ವಿಚಾರ ಪ್ರವಾಹವನ್ನು ಹರಿಸುತ್ತ ಹೋದರೆ ಭಾಷಣ ಕೂಡ ಸಂತೋಷವನ್ನು ಕೊಡುವುದರ ಜೊತೆಯಲ್ಲಿ ಬುದ್ಧಿಶಕ್ತಿಗೆ ಇನ್ನಷ್ಟು ಚೈತನ್ಯವನ್ನು ಒದಗಿಸಬಲ್ಲದು. ಯಾರೂ ಹುಟ್ಟಿನಿಂದ ಸಂಭಾಷಣಾ ಚತುರರಾಗಿರುವುದಿಲ್ಲ. ಶ್ರೇಷ್ಠ ಭಾಷಣಕಾರರೂ ಆಗಿರುವುದಿಲ್ಲ. ಸಾಮಾನ್ಯ ಸೂತ್ರಗಳನ್ನು ಅನುಸರಿಸುವ ಮೂಲಕ ಹಾಗೂ ಅನುಭವ ಮತ್ತು ತರಬೇತಿಯ ಮೂಲಕ ಪ್ರಾವೀಣ್ಯತೆಯನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಕೆಲವು ಸರಳವಾದ ಮಾರ್ಗದರ್ಶಕ ಸೂತ್ರಗಳನ್ನು ಒದಗಿಸಿಕೊಡುವುದರ ಜೊತೆಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತು-ಹಲವು ಮಾಹಿತಿಗಳನ್ನು ವಿಚಾರಗಳನ್ನು ಕೊಡಲು ಪ್ರಯತ್ನಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಹೆಜ್ಜೆಯಿಡಲು ಪ್ರಯತ್ನಿಸುವವರಿಗೆ ತೋರುಗೋಲಿನಂತೆ ಈ ಕೃತಿ ಒತ್ತಾಸೆಯನ್ನು ನೀಡುತ್ತದೆ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books