‘ನುಡಿಹಾರ -7’ ಕಾಂತಾವರ ಕನ್ನಡ ಸಂಘದಿಂದ ಪ್ರಕಟವಾದ ಕೃತಿ. ಸಾಹಿತ್ಯ ಸಂಸ್ಕೃತಿ ಕುರಿತ ಮಹಿಳಾ ಚಿಂತನ ಬರಹಗಳಿವೆ. ಕಾಂತಾವರ ಕನ್ನಡ ಸಂಘವು 2013ರಿಂದೀಚೆಗೆ ಎರಡು ವರ್ಷಕ್ಕೊಮ್ಮೆ ನಿರ್ದಿಷ್ಟವಾದ ವಸ್ತು ವಿಷಯವನ್ನು ಆರಿಸಿಕೊಂಡು ಅದನ್ನು ವಿಸ್ತರಿಸುವ ಸಲುವಾಗಿ ಕೃತಿ ಸಂಪಾದಿಸಿ ಪ್ರಕಟಿಸುವ ಕಾರ್ಯಮಾಡುತ್ತಿದೆ. ಅದರ ಭಾಗವಾಗಿ ಪ್ರಕಟವಾದ ಏಳನೇ ಕೃತಿ ನುಡಿಹಾರ-7.
ಕೃತಿಯಲ್ಲಿ ಅನುಪಮಾ ನಿರಂಜನ ಅವರ ಕಾದಂಬರಿ-ಎಳೆ” ಶ್ರೀಮತಿ ಪರಮೇಶ್ವರಿ ಲೋಕೇಶ್ವರ್, ಫಣಿಯಮ್ಮ- ಎ.ಪಿ. ಮಾಲತಿ, ಸೀತೆ-ರಾಮ-ರಾವಣ' ಕಾದಂಬರಿಯ ಮರು ಓದು ಶ್ರೀಮತಿ ಬಿ.ಎಂ.ರೋಹಿಣಿ, ಲಕ್ಷ್ಮಿ ಕುಂಜತ್ತೂರು ಎಂಬ ಎಲೆಯಮರೆಯ ಹೂ ಅವರ ಕಾದಂಬರಿ ಸರಣಿಯ ಕುರಿತು ಮಹೇಶ್ವರಿ, ಕುಸುಮಾಕರ ದೇವರಗಣ್ಣೂರ ಅವರ ನಾಲ್ಕನೆಯ ಆಯಾಮ ಒಂದು ಸಮೀಕ್ಷೆ- ಪೂರ್ಣಿಮಾ ಸುಧಾಕರ, ಸಂಧ್ಯಾರಾಗ ತರುವ ದೈವೀಕ ಪರಿವರ್ತನೆ- ಜ್ಯೋತಿ ಗುರುಪ್ರಸಾದ್, ಇಂದಿರೆ ಅಥವಾ ನಿರ್ಭಾಗ್ಯವನಿತೆ- ಶಶಿಕಲಾ ಚೊಕ್ಕಾಡಿ ಕಾಲಾವಂತೆಯ ಅಂತರಂಗವನ್ನು ತೆರೆದಿಡುವ ಕಾರಂತರ 'ಮೈಮನಗಳ ಸುಳಿಯಲ್ಲಿ'- ಡಾ. ಪಾರ್ವತಿ ಜಿ. ಐತಾಳ್, ಶಂಕರ ಮೊಕಾಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ ಮರು ಓದು- ಡಾ. ಶುಭಾ ಮರವಂತೆ, ಸೇರಿದಂತೆ ಹಲವು ಸಾಹಿತ್ಯ ಸಾಂಸ್ಕೃತಿಕ ಕೃತಿಗಳ ವಿಶ್ಲೇಷಣೆಗಳಿವೆ.
©2024 Book Brahma Private Limited.