‘ಸಂಸ್ಕೃತಿ’ ಹಿರಿಯ ಸಾಹಿತಿ ಡಿ.ವಿ.ಜಿ ಅವರು ಉಪನ್ಯಾಸ ಲೇಖನಗಳ ಸಂಗ್ರಹ. ಈ ಉಪನ್ಯಾಸದಲ್ಲಿ ಸಂಸ್ಕೃತಿ' ಮಾತ್ರವೇ ಅಲ್ಲದೆ, ಅದಕ್ಕೆ ಹೊಂದಿಕೊಂಡೇ ಇರುವ ಸತ್ಯ, ಧರ್ಮ, ಪ್ರಗತಿ ಇವೇ ಮೊದಲಾದ ಕೆಲವು ಜಟಿಲ ವಿಚಾರಗಳ ಪ್ರಸ್ತಾವವಿದೆ.
ಆತ್ಮ ವರ್ದನದಲ್ಲೂ ಊರ್ಧ್ವ ಗಮನದಲ್ಲೂ ಶ್ರದ್ಧಾಸಕ್ತಿ ಉಳ್ಳವರಿಗೆ ಈ ಪುಸ್ತಕವು ಪುಷ್ಟಿ-ತುಷ್ಟಿಗಳನ್ನು ಒದಗಿಸುವ ರಸಕವಳಗಳ ಅಕ್ಷಯ ಬುತ್ತಿ ಎಂದಿದ್ದಾರೆ ಜಿ.ಪಿ. ರಾಜರತ್ನಂ. ಪುಸ್ತಕದಲ್ಲಿ ಜ್ಞಾನಸೂತ್ರವಾಗಿ ಬುದ್ದಿಯ ವಿಕಾಸಕ್ಕೆ ಬೇಕಾಗುವ ವಿಚಾರಗಳಿವೆ.
©2024 Book Brahma Private Limited.