`ಕಲ್ಯಾಣದೆಡೆಗೆ' ಕೃತಿಯು ರಾಜ್ಯಾದಂತ ನಡೆದ `ಮತ್ತೆ ಕಲ್ಯಾಣ ಅಭಿಯಾನ'ದ ಸಭೆಗಳಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನೀಡಿದ ಆಶೀರ್ವಚನದ ಸಂಗ್ರಹವಾಗಿದೆ. ಈ ಕೃತಿಯ ಬಗ್ಗೆ ಬರೆಯುತ್ತಾ ಎಸ್.ಜಿ. ಸಿದ್ಧರಾಮಯ್ಯನವರು ‘ದೇಶವ್ಯಾಪಿ ಹಬ್ಬಿದ ಚಾತುರ್ವಣ್ಯ ವ್ಯವಸ್ಥೆಯನ್ನು ವಿರೋಧಿಸಿ ಹುಟ್ಟಿದ ಕಾಯಕ, ದಾಸೋಹ ತತ್ವದ ಧರ್ಮ ಶರಣ ಧರ್ಮ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಯುವ ಮನಸ್ಸುಗಳನ್ನು ಗುರಿಯಾಗಿಸಿಕೊಂಡು ಜನಜಾಗೃತಿಯನ್ನು ಒಳಗೊಳ್ಳುವ ವ್ಯಾಪ್ತಿಯಲ್ಲಿ ಇಡೀ ರಾಜ್ಯಾದ್ಯಾಂತ ಮತ್ತೆ ಕಲ್ಯಾಣದ ಆಂದೋಲನ ನಡೆಸಿದರು. ಈ ಸಂದರ್ಭದಲ್ಲಿ ಭಾಷೆ, ಶಿಕ್ಷಣ, ಧರ್ಮ, ಕೃಷಿ, ಉದ್ಯೋಗ, ರಾಜಕಾರಣ, ಜಾಗತೀಕರಣ ಹೀಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸ್ವಾಮಿಗಳು ಮಾತನಾಡಿರುವ ಭಾಷಣ ಈ ಕೃತಿಯಲ್ಲಿದೆ’ ಎಂದಿದ್ದಾರೆ.
©2024 Book Brahma Private Limited.