ಎಲ್.ಆರ್. ಹೆಗಡೆ ಅವರ ಭಾಷಣಗಳು

Author : ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

Pages 202

₹ 0.00




Year of Publication: 2020
Published by: ಮಿತ್ರ ಮಾಧ್ಯಮ
Address: ಬೆಂಗಳೂರು

Synopsys

‘ಎಲ್.ಆರ್. ಹೆಗಡೆ ಅವರ ಭಾಷಣಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಜಾನಪದ ಅಧ್ಯಾಯದಲ್ಲಿ; ಆಶಯಗಳ ವಿಶ್ವಸಾಮಾನ್ಯತೆ (ಧಾರವಾಡ ರೇಡಿಯೋದಲ್ಲಿ ಭಾಷಣ), ಬುಡಕಟ್ಟು ಜನಾಂಗಗಳು268(ಕರ್ನಾಟಕ ಜಾನಪದ ಯಕ್ಷಗಾನ ಅಕಾಡಮಿಯಲ್ಲಿ ಅಧ್ಯಕ್ಷ ಭಾಷಣ), ಜನಪದ ಸಾಹಿತ್ಯದಲ್ಲಿ ಸೃಜನಶೀಲತೆ (ಧಾರವಾಡ ರೇಡಿಯೋದಲ್ಲಿ ಮಾಡಿದ ಭಾಷಣ), ಚರ್ಮವಾದ್ಯ ಗೋಷ್ಠಿ 47 (ಕರ್ನಾಟಕ ವಿಶ್ವವಿದ್ಯಾಲಯದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ - ಸಮಾರೋಪದ ಅಧ್ಯಕ್ಷ ಭಾಷಣ, 1972, ಜನಪದ ಸಾಹಿತ್ಯ-ಮಾರ್ಗ ಸಾಹಿತ್ಯ 679(ಕೋಲಾರದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದ ಭಾಷಣ), ಬುಡಕಟ್ಟು ಸಂಸ್ಕೃತಿ ಮತ್ತು ಆಧುನಿಕತೆ 81 (ಕಾರವಾರ ರೇಡಿಯೋದಲ್ಲಿ ಮಾಡಿದ ಭಾಷಣ), ಕ.ವಿ.ವಿ. 27ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಲನದಲ್ಲಿ ಸನ್ಮಾನಿಸಿದ್ದಕ್ಕೆ ಉತ್ತರಿಸಿದ ಭಾಷಣ, ಜನಪದ ಕಥೆಗಳ ಹಿನ್ನಲೆ (ಅಕಾಡೆಮಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ವಿಚಾರ ಸಂಕಿರಣದಲ್ಲಿ ಮಂಡನೆ), ಜನಪದ ರಾಮಾಯಣ ಕಥಾಪ್ರಕಾರಗಳು (ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡ ಭಾಷಣ), ಜಾನಪದದಲ್ಲಿ ಶಿವ (ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದುದು) ಲೇಖನಗಳನ್ನು ಒಳಗೊಂಡಿದೆ. ವೈದ್ಯಪದ್ಧತಿ: ನಾಟೀ ವೈದ್ಯ ಸಮಾವೇಶ: ಉದ್ಘಾಟನಾ ಭಾಷಣ 118 ‘ಮಹಾಧನ್ವಂತರೀ ಪುನಃಶ್ಚರಣ ಮಹಾಯಾಗ ಮಹೋತ್ಸವ’ದ ಅಂಗವಾಗಿ ನಾಟೀ ವೈದ್ಯ ಸಮಾವೇಶದ ಉದ್ಘಾಟನೆಯನ್ನು ಮಾಡಿ ಕೆಲವು ಮಾತು. ಯಕ್ಷಗಾನ: ಕೆರೆಮನೆ ಮೇಳದ ವಜ್ರ ಮಹೋ ತ್ಸವದಲ್ಲಿ ಅಧ್ಯಕ್ಷ ಭಾಷಣ (ಇಡಗುಂಜಿ ಮಹಾಗಣಪತಿ ಪ್ರಾಸಾದಿಕ ಯಕ್ಷಗಾನ ಮಂಡಳಿ), ಮೂಡಲಪಾಯ ಯಕ್ಷಗಾನ ಶಿಬಿರದಲ್ಲಿ ಉದ್ಘಾಟನಾ ಭಾಷಣ (ಕೊನೇಹಳ್ಳಿಯಲ್ಲಿ 1982-10-2ರಂದು ಜರುಗಿದ ಹತ್ತು ದಿನಗಳ ಮೂಡಲಪಾಯ ಯಕ್ಷಗಾನ ಶಿಬಿರದಲ್ಲಿ ಮಾಡಿದ ಭಾಷಣ), ಗೋಷ್ಠಿ ಅಧ್ಯಕ್ಷ ಭಾಷಣ (ನಾಗಮಂಗಲ ಸಮ್ಮೇಳನದಲ್ಲಿ) ವಿಚಾರಗಳನ್ನು ಒಳಗೊಂಡಿದೆ.

About the Author

ಲಕ್ಷ್ಮೀನಾರಾಯಣ ಹೆಗಡೆ (ಎಲ್. ಆರ್. ಹೆಗಡೆ)

ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ...

READ MORE

Related Books