‘ವೈದಿಕ ಅವೈದಿಕ ದರ್ಶನ’ ಕಳೆದ ಐದು ವರ್ಷಗಳಿಂದ ಅಂತರ್ಜಾಲದ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಋತುಮಾನ ಸಂಸ್ಥೆಯ ಮೊದಲ ಪ್ರಕಟಣೆ ಇದು. 1997ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ಉಡುಪಿಯ ರಥಬೀದಿ ಗೆಳೆಯರ ಸಹ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ದಿನವಿಡೀ ನಡೆದ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಉಪನ್ಯಾಸಗಳ ಬರಹ ರೂಪ ಈ ಪುಸ್ತಕ.
ಹಲವು ವಿದ್ವತ್ ಪೂರ್ಣ ಪ್ರತಿಭೆಗಳು ನಡೆಸಿರುವ ಅಪರೂಪದ ಸಂವಾದ ವೈದಿಕ -ಅವೈದಿಕ ದರ್ಶನ. ಪ್ರಾಚೀನ ಭಾರತೀಯ ವೈದಿಕ-ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರಾದ ಡಿ.ಆರ್. ನಾಗರಾಜ್, ಅವಧಾನಿ ಅಶ್ವತ್ಥನಾರಾಯಣ ಮತ್ತೂರು, ಎಂ. ರಾಜಗೋಪಾಲ ಆಚಾರ್ಯ, ವಿದ್ವಾನ್ ಎನ್. ರಂಗನಾಥ ಶರ್ಮ, ಪ್ರಭಾಕರ್ ಜೋಶಿ, ಶ್ರೀಪತಿ ತಂತ್ರಿ, ರಾಜನ್ ಗುರುಕ್ಕಳ್ ಇಲ್ಲಿ ಮಾತಾಡಿದ್ದಾರೆ. ಮನುದೇವದೇವನ್ ಅವರು ಹಳೆಯ ಸಂವಾದಕ್ಕೊಂದು ಹೊಸ ಪ್ರತಿಕ್ರಿಯೆ ಬರೆದಿದ್ದಾರೆ. ಈ ಇಡೀ ಸಂವಾದವನ್ನು ಅಚ್ಚುಕಟ್ಟಾಗಿ ಬರಹರೂಪಕ್ಕಿಳಿಸಿದ್ದಾರೆ ಪ್ರಜ್ಞಾ ಶಾಸ್ತ್ರೀ.
©2025 Book Brahma Private Limited.