'ಪೇಟೆಂಟ್ ಪೆಡಂಭೂತ’ ಮಾಧವ ಐತಾಳ್ ಅವರ ಲೇಖನಗಳ ಬರಹವಾಗಿದೆ. ವಸಾಹತೀಕರಣ ಹಾಗೂ ಪೇಟೆಂಟ್‌ಗಳ 'ಮಧುರ ಬಾಂಧವ್ಯ'ದ ಅಪಾಯವನ್ನು ಮಾಧವ ಐತಾಳ್ ಅವರು ಇತಿಹಾಸದ ಹಿನ್ನೆಲೆಯಲ್ಲಿ ಗುರುತಿಸುತ್ತಾರೆ. ಅಮೆರಿಕದ ಪೇಟೆಂಟ್ ಕಾಯಿದೆಯ ಹಿನ್ನೆಲೆಯ ಕುತಂತ್ರವನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. 'ಬೌದ್ಧಿಕ ಚೌರ್ಯ ತಡೆಯಲೆ೦ದು ಸೃಷ್ಟಿಯಾದ ಕಾನೂನು ಕಳ್ಳತನವನ್ನು ಕಾನೂನುಬದ್ಧಗೊಳಿಸಿತು' ಎಂಬ ಮಾತು ಪೇಟೆಂಟ್ ಪೆಡಂಭೂತ ಸ್ವರೂಪವನ್ನು ಚೆನ್ನಾಗಿ ತಿಳಿಸುತ್ತದೆ.
ಹೊಸತು- ಸೆಪ್ಟೆಂಬರ್-2005
ಪೇಟೆಂಟ್ ಕಾಯಿದೆಯ ಸ್ವರೂಪ ಮತ್ತು ಅದು ಸಮಾಜದ ಮೇಲೆ ಬೀರಿರುವ ದುಷ್ಪಪರಿಣಾಮಗಳನ್ನು ಈ ಕೃತಿ ವಿವರವಾಗಿ ವಿಶ್ಲೇಷಿಸುತ್ತದೆ. ಸಾಕಷ್ಟು ಮಾಹಿತಿಗಳನ್ನು ಶ್ರಮವಹಿಸಿ ಲೇಖಕರು ಸಂಗ್ರಹಿಸಿಕೊಟ್ಟಿದ್ದಾರೆ. ಹಲವಾರು ಸಂಗತಿಗಳನ್ನು ಗಮನ ಸೆಳೆಯುವಂತೆ ಅಲ್ಲಲ್ಲಿ ಪುಸ್ತಕದ ಚೌಕಟ್ಟಿಗೆ ಹೊಂದಿಸಿ ಪತ್ರಿಕಾಬರಹದಂತೆ ಟಿಪ್ಪಣಿಗಳನ್ನು ಕೊಟ್ಟಿರುವುದು ಇಲ್ಲಿನ ವೈಶಿಷ್ಟ್ಯ. ವಸಾಹತೀಕರಣ ಹಾಗೂ ಪೇಟೆಂಟ್‌ಗಳ 'ಮಧುರ ಬಾಂಧವ್ಯ'ದ ಅಪಾಯವನ್ನು ಮಾಧವ ಐತಾಳ್ ಅವರು ಇತಿಹಾಸದ ಹಿನ್ನೆಲೆಯಲ್ಲಿ ಗುರುತಿಸುತ್ತಾರೆ. ಅಮೆರಿಕದ ಪೇಟೆಂಟ್ ಕಾಯಿದೆಯ ಹಿನ್ನೆಲೆಯ ಕುತಂತ್ರವನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. 'ಬೌದ್ಧಿಕ ಚೌರ್ಯ ತಡೆಯಲೆ೦ದು ಸೃಷ್ಟಿಯಾದ ಕಾನೂನು ಕಳ್ಳತನವನ್ನು ಕಾನೂನುಬದ್ಧಗೊಳಿಸಿತು' ಎಂಬ ಮಾತು ಪೇಟೆಂಟ್ ಪೆಡಂಭೂತ ಸ್ವರೂಪವನ್ನು ಚೆನ್ನಾಗಿ ತಿಳಿಸುತ್ತದೆ. ಪೇಟೆಂಟ್‌ನ ಸ್ವರೂಪ-ಇತಿಹಾಸದ ಬಗ್ಗೆ ಈ ಕೃತಿ ಸಾಕಷ್ಟು ಸಂಗತಿಗಳನ್ನು ತಿಳಿಸಿದರೂ ನಿರೂಪಣೆಯ ಜೋಡಣೆಯಲ್ಲಿ ಇನ್ನಷ್ಟು ಕ್ರಮಬದ್ಧತೆ ಇರಬೇಕೆನಿಸುತ್ತದೆ.
©2024 Book Brahma Private Limited.