ಉಪನ್ಯಾಸಗಳ ಮಾತಿಗೆ ಕೃತಿಯನ್ನು ಪ್ರೇರೇಪಿಸುವ ಪುಸ್ತಕವಾಗಿ ’ಉಪನ್ಯಾಸಗಳ ಗುಚ್ಛ’ವನ್ನು ಲೇಖಕರಾದ ಅರವಿಂದ ಚೊಕ್ಕಾಡಿ ಅವರು ತಂದಿದ್ದಾರೆ.ಅರವಿಂದ ಚೊಕ್ಕಾಡಿ ಅವರು ನೀಡುವ ಉಪನ್ಯಾಸಗಳ ಪ್ರತಿಯೊಂದು ಪದವೂ ಅರ್ಥಪೂರ್ಣವಾಗಿರುತ್ತದೆ.ಅಷ್ಟು ವ್ಯವಸ್ಥಿತವಾಗಿ ಅವರು ಉಪನ್ಯಾಸವನ್ನು ಸಿದ್ಧಪಡಿಸುತ್ತಾರೆ.ಎಷ್ಟನ್ನು ಹೇಳಬೇಕು,ಹೇಗೆ ಹೇಳಬೇಕು,ಕೇಳುಗರ ಬೌದ್ಧಿಕ ಮಟ್ಟ ಯಾವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಹಳ ಗಂಭೀರವಾಗಿ ಉಪನ್ಯಾಸವನ್ನು ಲಿಖಿತ ರೂಪದಲ್ಲಿ ಸಿದ್ದಪಡಿಸಿದ್ದಾರೆ.
ಈ ಪುಸ್ತಕಕ್ಕೆ ಜೋಸೆಫ್ ಅವರು ಬರೆದ ಬೆನ್ನುಡಿ ಹೀಗಿದೆ :
’ವ್ಯಾಕರಣ ಬಹು ಬೇಗ ಮರೆತು ಹೋಗುತ್ತದೆ.ಆದರೆ ಸಮಸ್ಯೆ ಬಂದಾಗ ವ್ಯಾಕರಣ ಪುಸ್ತಕವನ್ನು,ಶಬ್ದಕೋಶವನ್ನು ನಾವು ಪರಿಶೀಲಿಸಿಯೇ ತೀರುತ್ತೇವೆ.ಈ ಪುಸ್ತಕವೂ ಹಾಗೆಯೇ.ಕರೆದದ್ದಕ್ಕೆ ಏನಾದರೂ ಮಾತನಾಡಬೇಕಲ್ಲ ಎಂದು ಸನ್ನಿವೇಶವನ್ನು ಅರಿತುಕೊಳ್ಳದೆ ಮಾತನಾಡುವವರೇ ಜಾಸ್ತಿಯಾಗುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಇದು ಇನ್ನೂ ಕಳಪೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.ಅಂತಹ ಸಂದರ್ಭದಲ್ಲಿ ವಿಷಯವನ್ನು ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲದೆ ಆದಾಗ,ಸರಿಯಾದ ಉಪನ್ಯಾಸ ಹೇಗಿರುತ್ತದೆ ಎಂದು ಮುಂದಿನ ಪೀಳಿಗೆಗೆ ಪರಿಶೀಲಿಸಲು ಇದೊಂದು ಅತ್ಯುತ್ತಮ ಆಕರ ಗ್ರಂಥವಾಗಲಿದೆ.ಏಕೆಂದರೆ ಇದೊಂದು 'ಹುಟ್ಟು ಪ್ರತಿಭಾವಂತ' ನ ರಚನೆ.ವಿಷಯ ಎಲ್ಲರಿಗೂ ಗೊತ್ತಿದೆ.ಆದರೆ ಅದನ್ನು ಅರವಿಂದರು ಹೇಳುವ ಹಾಗೆ ಹೇಳಲು ಅವರೊಬ್ಬರಿಗೆ ಮಾತ್ರ ಸಾಧ್ಯ.ಈ ' ಒರಿಜಿನಲ್ ಥಿಂಕಿಂಗ್','ಗಿಫ್ಟೆಡ್' ವ್ಯಕ್ತಿಗಳಲ್ಲೆ ಇರುವುದು’.
©2024 Book Brahma Private Limited.