ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ ಕೃತಿ-ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆ. ಭಾವೈಕ್ಯತೆಯ ತವನಿಧಿ ಶಿಶುನಾಳ ಶರೀಫ ಸಾಹೇಬರ ತತ್ವಪದಗಳ ಆಧಾರದ ಮೇಲೆ ಈ ಕೃತಿಯು ರಚನೆಗೊಂಡಿದೆ. ಭಿನ್ನತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ, ಅಗಲಿಸುವವರ ನಡುವೆ ಕೂಡಿ ಬದುಕನ್ನು ಸಾಧಿಸಿದ ಮಹೋನ್ನತ ವ್ಯಕ್ತಿತ್ವದ ಶರೀಫರ ತತ್ವಪದಗಳ ದೃಷ್ಠಿಕೋನದಲ್ಲಿ ಎರಡು ತತ್ವಗಳನ್ನು ಸಮನ್ವಯಿಸುವ ಕೆಲಸವನ್ನು ಈ ಕೃತಿಯು ಮಾಡಿದೆ. ಶರೀಫರ ತತ್ವಪದಗಳು ನಾಡಿನಲ್ಲಿ ಜನಜನಿತಗೊಂಡಿವೆ. ಆದರೂ ಕೆಲವೊಂದು ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಲ್ಲಿ ವಿಘ್ನಸಂತೋಷಿಗಳಂತೆ ವರ್ತಿಸಿ, ನಮ್ಮ ನಾಡಿನ ಸಾಂಸ್ಕೃತಿಕ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ. ಶರೀಫರನ್ನು ಸರಿಯಾಗಿ ತಿಳಿದು ಕೊಂಡಲ್ಲಿ ಕಿಡಿಗೇಡಿಗಳ ಅಟ್ಟಹಾಸ ತಾನೇತಾನಾಗಿ ಗೌಣವಾಗುತ್ತದೆ. ಶರೀಫರ ತತ್ವಪದಗಳ ಚಿಂತನೆ ಮತ್ತು ಅದರಲ್ಲೂ ಪಾರಮಾರ್ಥಿಕ ಅಂತಿಮ ಸತ್ಯವನ್ನು ಅರಿಯುವುದೇ ಎಲ್ಲಾ ಧರ್ಮಗಳ ಮೂಲವಾಗಿದೆ ಎಂದೂ ಈ ಕೃತಿ ಪ್ರತಿಪಾದಿಸುತ್ತದೆ.
©2024 Book Brahma Private Limited.