ಸ್ಪೂರ್ತಿ ರಾಮಾಯಣ-2 ‘ಅಯೋಧ್ಯಾಕಾಂಡ’ ಜಗದೀಶಶರ್ಮಾ ಸಂಪ ಅವರ ಕೃತಿ ಇದಾಗಿದ್ದು, ಈ ಕೃತಿಯ ಕುರಿತು ಬರೆಯುತ್ತಾ; 'ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ. ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ.
ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ. ಕುಟುಂಬ ಮತ್ತು ಸಮೂಹದ ಪ್ರೀತಿ - ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು. ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ' ಎಂದಿದ್ದಾರೆ.
©2025 Book Brahma Private Limited.