ಶ್ರೀಧರ ಸ್ವಾಮಿಗಳವರು ಮಲೆನಾಡಿನ ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆ ಗಳಲ್ಲಿ ತಪಃಸಾಧನೆ ಮಾಡಿದ ಸ್ಥಾನಗಳು ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸಿವೆ. ಸಾಗರದ ಸಮೀಪದ ಕಗ್ಗಾಡು ವದ್ದಳ್ಳಿಯ ಶ್ರೀಧರತೀರ್ಥ ಇಂದು ಭಕ್ತರ ವರದಪುರ ವೆನಿಸಿ ಕಂಗೊಳಿಸಿದೆ. ಇದೇ ಕ್ಷೇತ್ರದಲ್ಲಿ ಅವರ ಯೋಗಸಮಾಧಿಯಾಗಿರುವು ದೊಂದು ವಿಶೇಷ. ಶ್ರೀಧರ ಸ್ವಾಮಿಗಳವರ ದೃಷ್ಟಿ ವಿಶ್ವ ವಿಶಾಲವಾಗಿತ್ತು. ಅವರು ಬಹುಶ್ರುತರೂ ಆಗಿದ್ದರು. ಸಂಸ್ಕೃತ, ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪರಿಣತರಾಗಿದ್ದರು. ಆ ಭಾಷೆಗಳಲ್ಲಿ ಪ್ರವಚನಗಳನ್ನು ನೀಡಿ ಜನರಲ್ಲಿ ಅಧ್ಯಾತ್ಮದತ್ತ ಆಸಕ್ತಿ ಮೂಡಿಸಿದುದಲ್ಲದೆ, ಸ್ತೋತ್ರಗಳನ್ನೂ ರಚಿಸಿ, ಭಾವಪರವಶ ರಾಗಿ ಹಾಡಿ ಭಕ್ತರ ಹೃದಯದಲ್ಲಿ ಭಕ್ತಿಯ ಗಂಗೋತ್ರಿಯನ್ನು ಹರಿಸಿ ಅವರ ಜೀವನ ಪಾವನಗೊಳಿಸಿದ ಮಹನೀಯರು ಎಂದು ಡಿ.ವೀರೇಂದ್ರ ಹೆಗ್ಗಡೆಯವರು ಮುನ್ನಡಿಯಲ್ಲಿ ಬರೆದ ಒಂದು ಭಾಗ.
©2025 Book Brahma Private Limited.