ಖ್ಯಾತ ಪ್ರವಚನಕಾರ, ಧಾರ್ಮಿಕ ಗುರು ಸದ್ಗುರು (ಜಗ್ಗಿ ವಾಸುದೇವ) ಅವರ ರಚಿಸಿರುವ ಕೃತಿ-ಆನಂದ ಅಲೆ: ಆಸೆಪಡು, ಸಾಧಿಸು. ಯೋಗಿ, ದಾರ್ಶನಿಕ, ಅಧ್ಯಾತ್ಮಿಕ ನಾಯಕ ಎಂದೇ ಖ್ಯಾತಿಯ ಸದ್ಗುರು ಅವರು ‘ಬದುಕಿನಲ್ಲಿ ಆನಂದವನ್ನು ಕಾಣಲು ಜನರು ಎಲ್ಲೆಲ್ಲೋ ತಿರುಗಾಡುತ್ತಾರೆ. ಮಾಡಬಾರದ್ದೆಲ್ಲ ಮಾಡಿ ದಣಿಯುತ್ತಾರೆ. ಕೊನೆಗೂ ಆನಂದ ಕಾಣದೇ ಹೌಹಾರುತ್ತಾರೆ. ಆದರೆ, ನೈಜ ಆನಂದ ಇರುವುದು ನಮ್ಮ ಮನಸ್ಸಿನೊಳಗೆ ಎಂಬುದು ಜನರು ಅರಿಯದೇ ಹೋಗುತ್ತಾರೆ. ಇದು ಬದುಕಿನ ದುರಂತಕ್ಕೆ ಕಾರಣವಾಗುತ್ತದೆ. ಅಂತರಂಗದಲ್ಲಿ ದೇವರು ಇದ್ದು, ಆತನನ್ನು ಅಂತರ್ಮುಖಿಯಾಗಿಯೇ ನೋಡಬೇಕು. ಅತ್ಯಂತ ಸಹನೆ, ಶ್ರದ್ಧೆ ಇರಬೇಕು. ಆಗಲೇ ಬದುಕು ಆನಂದ ಹೊಂದಲು ಸಾಧ್ಯ’ ಎನ್ನುವ ತಿರುಳು ಈ ಕೃತಿಯಲ್ಲಿದೆ.
©2025 Book Brahma Private Limited.