ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀ ರಾಮಾಯಣದ ಮಹಾಪ್ರಸಂಗಗಳು. ಶ್ರೀ ರಾಮಾಯಣವು ಜೀವನ ಆದರ್ಶಗಳನ್ನು ಹೇಳುವ ಮಹಾಕಾವ್ಯ. ಘಟನೆ-ಸನ್ನಿವೇಶ-ಪಾತ್ರಗಳು-ಪ್ರಸಂಗಗಳ ಮೂಲಕ ಲೌಕಿಕತೆ ಹಾಗೂ ಅಲೌಕಿಕತೆಯ ಸ್ವರೂಪವನ್ನು ಬಿಂಬಿಸುತ್ತವೆ. ಮಾತ್ರವಲ್ಲ; ಸಮಸ್ಯೆಗಳಿಗೆ ಪರಿಹಾರವೂ ಸೂಚಿಸುತ್ತವೆ. ವಾಸ್ತವ ಹಾಗೂ ಆದರ್ಶಕ್ಕಿರುವ ವ್ಯತ್ಯಾಸವನ್ನೂ ತಿಳಿಸುತ್ತವೆ. ಲೇಖಕರು ಇಂತಹ ಪ್ರಯತ್ನವನ್ನು ಕೃತಿಯಲ್ಲಿ ಮಾಡಿದ್ದು, ವಿದ್ವತ್ ಪೂರ್ಣವಾದ ಚಿಂತನೆಗಳಿಂದ ಕೃತಿಯು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.