ವಿಜಯನಗರದ ಲಕ್ಕಣ್ಣ ದಂಡೇಶ, ಕನ್ನಡ ಧ್ವಜವನ್ನು ಮುಗಿಲೆತ್ತರಕೆ ಹಾರಿಸಿ ಕನ್ನಡದ ಕೀರ್ತಿಯನ್ನು ಬೆಳಗಿಸಿದವರು. ಲಕ್ಕಣ್ಣ ದಂಡೇಶ ರಚಿಸಿದ ’ಶಿವತತ್ವ ಚಿಂತಾಮಣಿ’ ಪ್ರಾಚೀನ ಶೈವ, ವೀರಶೈವ ಎರಡರ ಕೊಂಡಿಯಾಗಿದೆ. ವಿಜಯನಗರದ ಚರಿತ್ರೆಯ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಈ ಕೃತಿಯೂ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಶೈವ ಸಂಸ್ಕೃತಿಯ ಪರಂಪರಾಗತ ಸತ್ವವನ್ನು ಎತ್ತಿ ಹಿಡಿಯುತ್ತದೆ.
©2024 Book Brahma Private Limited.