ಪ್ರಶಾಂತತೆಯ ವಚನಸಿರಿ

Author : ಶ್ರೀನಿವಾಸ ಕೃ. ದೇಸಾಯಿ

Pages 144

₹ 135.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ ಜಿಲ್ಲೆ)
Phone: 09916595916

Synopsys

ಆಂಗ್ಲ ಲೇಖಕ ಎಕ್ ಹಾರ್ಟ್ ಟೊಲ್ಲೆ ಅವರ ‘ಸ್ಟಿಲ್ ನೆಸ್ ಸ್ಪೀಕ್ಸ್’ ಕೃತಿಯನ್ನು ಲೇಖಕ ಶ್ರೀನಿವಾಸ ಕೃ. ದೇಸಾಯಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಪ್ರಶಾಂತತೆಯ ವಚನಸಿರಿ. ಮೌನವೆಂದರೆ ಮಾತಿಲ್ಲದೇ ಇರುವ ಮನಸ್ಥಿತಿಯಲ್ಲ. ಮೌನದಲ್ಲೂ ಮಾತುಗಳಿದ್ದು, ಅವುಗಳನ್ನು ಕೇಳುವ ಮನಸ್ಸು ಆತ್ಮಾವಲೋಕನ ಮಾಡಿಕೊಳ್ಳುತ್ತದೆ. ಮನಸ್ಸಿನ ಪರಿಶುದ್ಧತೆಗೆ ದಾರಿ ಮಾಡಿಕೊಡುತ್ತದೆ. ಗೊಂದಲದ ಸ್ಥಿತಿಯಲ್ಲಿ ಮೌನದ ಮಾತು ಖಚಿತ ನಿರ್ಧಾರದ ಧ್ವನಿಯಲ್ಲಿ ಹೇಳುತ್ತದೆ. ಆದ್ದರಿಂದ, ಬರೀ ಮಾತು ಮತ್ತಷ್ಟು ಮನಸ್ಸನ್ನು ಹದಗೆಡಿಸಬಹುದು. ಆಧರೆ, ಪ್ರಶಾಂತತೆಯ ವಚನವು ಒಂದರ್ಥದಲ್ಲಿ ‘ಸಿರಿ’ ಯಂತೆ ಬರುತ್ತದೆ ಎಂಬ ಚಿಂತನೆಗಳು ಹರಳುಗಟ್ಟಿರುವ ಕೃತಿ ಇದು.

About the Author

ಶ್ರೀನಿವಾಸ ಕೃ. ದೇಸಾಯಿ

ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.  ...

READ MORE

Related Books