ರಂಗನಾಥ ದಿವಾಕರರು ಹಿಂಡಲಗಾ ಸೆರೆಮನೆಯಲ್ಲಿರುವಾಗ ಗುಜರಾತಿನ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮಥುರಾದಾಸ್ ಎಂಬುವರು ಉತ್ತಮ ಗೀತಾಭ್ಯಾಸಿಗಳು. ಇವರ ಗೀತಾಭ್ಯಾಸ ಹಾಗೂ ಗಾಂಧೀಜಿ ಅವರ ಅನಾಸಕ್ತಿಯೋಗ- ಈ ಎರಡೂ ವಿಚಾರಗಳ ಹಿನ್ನೆಲೆಯಲ್ಲಿ ಕರ್ಮಯೋಗದ ಬಗ್ಗೆ ಉಪನ್ಯಾಸ ಬರೆಯಬೇಕು ಮತ್ತು ಮೊದಲು ಈ ಕೃತಿಯು ಗುಜರಾತಿನಲ್ಲಿ ಪ್ರಕಟವಾಗಬೇಕು ತದನಂತರ ಅದನ್ನು ಕನ್ನಡಕ್ಕೆ ಅನುವಾದಿಸಬೇಕು ಎಂದು ಇಬ್ಬರಲ್ಲೂ ಒಪ್ಪಂದವಾದ ಪರಿಣಾಮ ಈ ಕೃತಿ ಮೊದಲು ಮಥುರಾದಾಸ್ ರಿಂದ ಗುಜರಾತಿನಲ್ಲಿ (1934) ನಂತರ ರಂಗನಾಥ ದಿವಾಕರರಿಂದ (1935) ಪ್ರಕಟಗೊಂಡಿತ್ತು.
ಕರ್ಮಯೋಗದ ಸಂದೇಶ ತಿಳಿಯಲು ಈ ಕೃತಿ ಅತ್ಯಂತ ಉಪಯುಕ್ತ. ಕರ್ಮಯೋಗ, ಭೌತಿಕ ದೃಷ್ಟಿ, ಸುಖ ಮತ್ತು ದುಃಖ, ಸೃಷ್ಟಿ ಮತ್ತು ಸಮಷ್ಠಿ, ಭಕ್ತಿಯೋಗದ ಲಕ್ಷಣಗಳು ಹೀಗೆ ವಿವಿಧ ವಿಷಯ ವೈವಿಧ್ಯತೆ ಒಳಗೊಂಡ ಅಧ್ಯಾಯಗಳು ಈ ಕೃತಿಯಲ್ಲಿ ಚರ್ಚಿತವಾಗಿವೆ.
©2024 Book Brahma Private Limited.