‘ಶಿವಲಿಂಗ ಕಾವ್ಯ’ ವಿರೂಪಾಕ್ಷಪ್ಪ ಕೋರಗಲ್ಲ ಅವರು ಬರೆದಿರುವ ಆಧ್ಯಾತ್ಮಿಕ ಕೃತಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಕೆಲವು ವೀರಶೈವ ಮಠಗಳು ನಿಜವಾದ ಅರ್ಥದಲ್ಲಿ ಮಠಗಳಾಗಿವೆ. ಅನ್ನ ದಾಸೋಹ, ಜ್ಞಾನ ದಾಸೋಹಗಳನ್ನು ಅನೂಚಾನವಾಗಿ ನಡೆಯಿಸಿಕೊಂಡು ಬರುವ ಮೂಲಕ ಸ್ಥಾವರ ಮಠಗಳಿಗೆ ಜಂಗಮ ರೂಪ ಕೊಟ್ಟಿವೆ. ಒಡಲ ಬಡ ಬಡಿಕೆಯಲ್ಲಿ ಮುಳುಗಿ ಹೋಗದೆ, ಪೊಡವಿಯನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ನಡೆ ದೇಗುಲಗಳಿಗೆ ಶಕ್ತಿ ಕೊಟ್ಟ ಸ್ವಾಮಿಗಳೂ ಇದ್ದಾರೆ. ಸಮಾಜಕ್ಕಾಗಿ ಏನೆಲ್ಲಾ ಮಾಡಿದರೂ ಮಾಡಿದೆನೆಂಬ ಹಮ್ಮು ತುಂಬಿಕೊಳ್ಳದೆ, ಮಾಡುವ ನಿಜಗುಣವನ್ನು ತೆರೆದಿಟ್ಟಿದ್ದಾರೆ. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಂದೇಶವನ್ನು ಇಪ್ಪತ್ತನೆಯ ಶತಮಾನದಲ್ಲಿಯೂ ಅನುಷ್ಠಾನ ಗೊಳಿಸಲಿಕ್ಕೆ ಪ್ರಯತ್ನಿಸಿದವರು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಹಾಗೂ ಶ್ರೀ ಶಿವಬಸವಸ್ವಾಮಿಗಳು ಮತ್ತು ಅವರಿಬ್ಬರ ಕರ ಹರಕೆಯನ್ನು ಪಡೆದ ಹಾವೇರಿ ಹುಕ್ಕೇರಿಮಠದ ಈಗಿನ ಪಟ್ಟಾಧ್ಯಕ್ಷರಾದ ಶ್ರೀ ಶಿವಲಿಂಗ ಸ್ವಾಮಿಗಳು ಎಂಬುದನ್ನು ಈ ಕೃತಿಯಲ್ಲಿ ಲೇಖಕರು ವಿವರಿಸಿದ್ದಾರೆ.
©2025 Book Brahma Private Limited.