ಏಕದೇವೋಪಾಸನೆ ಮತ್ತು ಯೋಗಸಾಧನೆ ಇವು ನಾಥಪಂಥದ ತಾತ್ವಿಕ ತಳಹದಿಗಳಾಗಿವೆ. ಈ ಗ್ರಂಥವು ಯೋಗ ಸಧನೆಯ ಕುರಿತು ವಜ್ರೋಲಿಯಂತಹ ಯೋಗ ಪ್ರಕ್ರಿಯೆಯ ಕುರಿತು ನಾಥ ಪರಂಪರೆಯ ಸಿದ್ಧಾಂತಗಳು ಮತ್ತು ಆಚರಣೆಗಳ ಕುರಿತು, ನವನಾಥರ ಕುರಿತು ಬೆಳಕು ಚೆಲ್ಲುತ್ತದೆ. ಪುಸ್ತಕದಲ್ಲಿ ಒಟ್ಟು 11 ಅಧ್ಯಾಯಗಳಿವೆ. ನಾಥಪಂಥ ಮತ್ತು ಬಸವಣ್ಣ, ಗೋರಖನಾಥ ಮತ್ತು ದರ್ಶನಯೋಗಿಗಳು, ದೀಕ್ಷಾವಿಧಿ, ಹರಕೆಗಳು ಮತ್ತು ಪ್ರತಿಜ್ಞೆಗಳು, ನಾಥಪಂಥದ ಪ್ರಮುಖ ಉಪಪಂಥಗಳು, ಧರ್ಮ ಮತ್ತು ಮೂಢನಂಬಿಕೆಗಳು, ನಾಥ ಸಮುದಾಯದ ದೇವಗಣಗಳು, ಗೋರಖನಾಥ, ಯೋಗ ಮತ್ತು ತಂತ್ರ, ಗೋರಕ್ಷ ಪದ್ಧತಿ, ಪ್ರಣವ ಅಭ್ಯಾಸ ಮಾಡುವ ರೀತಿ.
ಲೇಖಕ ಹಬ್ಬು ಅವರು ’ನನ್ನಲ್ಲಿ ಈ ಧರ್ಮದ ಬಗ್ಗೆ ಬೆರಗನ್ನುಂಟು ಮಾಡಿದ ಅಂಶಗಳೆಂದರೆ ವೈದಿಕ ಆಧ್ಯಾತ್ಮವನ್ನೇ ಇದಮಿತ್ಥಂ ಎಂದು ಬಗೆದ ನನಗೆ ಅವೈದಿಕ ಆಧ್ಯಾತ್ಮವು ಅದರನ ಮಾನವಪರ ನಿಲುವಿನಿಂದ ಮತ್ತು ಜಾತ್ಯತೀತತೆಯಿಂದ ನನ್ನ ಮನಸ್ಸನ್ನು ಹಿಡಿದದ್ದು ಸುಳ್ಳೇನಲ್ಲ. ಇದೊಂದು ತಳಸಮುದಾಯದವರ ಆಧ್ಯಾತ್ಮ. ಇದು ಅಲಕ್ಷಕ್ಕೆ ಒಳಗಾಗಿದೆ ಎಂದು ನನ್ನ ಭಾವನೆ’ ಎಂದು ವಿವರಿಸಿದ್ದಾರೆ.
ಈ ಕೃತಿಯು ಯೋಗ ಸಾಧನೆಯ ಕುರಿತು, ವಜ್ರೋಲಿಯಂಥಹ ಯೋಗ ಪ್ರಕ್ರಿಯೆ, ನಾಥ ಪರಂಪರೆಯ ಸಿದ್ಧಾಂತಗಳು ಹಾಗೂ ಆಚರಣೆಗಳು, ನವನಾಥರ ಬಗ್ಗೆ ಆಳವಾದ ಅಧ್ಯಯನದೊಂದಿಗೆ ವಿವರಿಸಿದೆ. ಉದಯಕುಮಾರ್ ಹಬ್ಬು ಅವರು ನಾಥಪಂಥ ಸಿದ್ಧಾಂತವನ್ನು ನಂಬಿ ಅದರ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ನಾಥಪಂಥದ ಪ್ರಮುಖ ಉಪಪಂಥಗಳು, ಧರ್ಮ ಮತ್ತು ಮೂಢನಂಬಿಕೆ, ದೀಕ್ಷಾವಿಧಿ, ಯೋಗ ಮತ್ತು ತಂತ್ರ, ಗೋರಕ್ಷ ಪದ್ದತಿ ಹೀಗೆ ಹಲವಾರು ಆಚರಣೆಗಳ ಬಗ್ಗೆ ಪುಸ್ತಕವು ಹೆಚ್ಚಿನ ಮಾಹಿತಿ ನೀಡಿದೆ.
©2024 Book Brahma Private Limited.