ಶ್ರೀಕೃಷ್ಣಕಥೆಗಳಲ್ಲಿ ಬರುವ ಸೂಕ್ಷ್ಮ ಪರಿಶೀಲನೆಯ ಜಿವನತತ್ತ್ವವಿಚಾರಗಳು ಇಲ್ಲಿ ವಿಶ್ಲೇಷಣೆಗೆ ಒಳಪಟ್ಟಿವೆ. ಡಿವಿಜಿ ಅವರ ಕೃತಿ ಇದು. ಶ್ರೀಕೃಷ್ಣನು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ದರ್ಶನ ನೀಡಿದ್ದು, ಅವರವರ ಭಾವ ಭಕುತಿಗೆ ಶ್ರೀ ಕೃಷ್ಣನನ್ನು ದರ್ಶನ ಪಡೆದಿದ್ದಾರೆ. ಯಾರು ಎಷ್ಟೇ ದರ್ಶನ ಪಡೆದರೂ ಅವರವರ ಭಾವಕ್ಕೆ ತಕ್ಕಂತೆ ವರ್ಣಿಸಿದ್ದು, ಶ್ರೀ ಕೃಷ್ಣನ ವಿರಾಟ ಸ್ವರೂಪಕ್ಕೆ ಸಾಕ್ಷಿಯಂತಿದೆ. ಯಾರೂ ಹೇಗೇ ವರ್ಣಿಸಿದರೂ ಅದು ಶ್ರೀಕೃಷ್ಣನ ಭಾಗ್ಯವೇ ಆಗಿದೆ. ಎಲ್ಲವೂ ಆತನ ಲೀಲೆಯ ಭಾಗವಾಗಿದೆ. ಇಂತಹ ಭಾವದ ವಿರಾಟ ಸ್ವರೂಪವನ್ನು ಇಲ್ಲಿ ಅನಾವರಣಗೊಳಿಸಿದ್ದು, ಲೇಖಕ ಡಿ.ವಿ.ಜಿ ಅವರ ಸೂಕ್ಷ್ಮ ಹಾಗೂ ಒಳನೋಟದ ದಿವ್ಯ ದರ್ಶನವಾಗುತ್ತದೆ.
©2025 Book Brahma Private Limited.