ಕವಿ ಮಧುರಚೆನ್ನ ಅವರು ಬರೆದ ಅಧ್ಯಾತ್ಮಿಕ ಕಥೆ-ಕಾಳರಾತ್ರಿ. ವರಕವಿ ದ.ರಾ.ಬೇಂದ್ರೆ ಅವರು ಈ ಕೃತಿಗೆ ಮುನ್ನುಡಿ ಬರೆದು ’ಕಾಳರಾತ್ರಿ ಶೈಲಿಯಲ್ಲಿ ಒಂದು ಪ್ರಭಾವವಿದೆ. ವೈಭವವಿದೆ. ವರ್ಣನೆಯ ಸೊಗಸಿದೆ. ವಿಚಾರಗಳನ್ನು ಸಂಕ್ಷೇಪವಾಗಿಯೂ, ವಿಸ್ತೃತವಾಗಿಯೂ ಮಂಡಿಸುವ ಜಾಣ್ಮೆ ಇದೆ. ಜೋಕೆ ಇದೆ. ಎಲ್ಲೆಲ್ಲಿಯೂ ಪ್ರಾಮಾಣಿಕತೆ ಹೊರಸೂಸುತ್ತಿದೆ. ನಟನೆ ಇಲ್ಲ. ಹಗರಣವಿಲ್ಲ. ಸಾಹಿತ್ಯದೃಷ್ಟಿಯಿಂದ ಇದು ಬೇಕಾದ ಪುಸ್ತಕ ಎಂದು ಪ್ರಮಾಣಪತ್ರ ನೀಡಿದ್ದಾರೆ.
©2025 Book Brahma Private Limited.