‘ಶ್ರೀ ಶಿವಲಿಂಗೇಶ್ವರ ಪುರಾಣ’ ಕೃತಿಯು ವಿರೂಪಾಕ್ಷಪ್ಪ ಕೋರಗಲ್ಲ ಅವರು ಬರೆದಿರುವ ಆಧ್ಯಾತ್ಮಿಕ ಗ್ರಂಥವಾಗಿದೆ. ಹುಕ್ಕೇರಿಮಠವು ಉತ್ತರ ಕರ್ನಾಟಕದ ಹಲವು ಲಿಂಗಾಯತ ಮಠಗಳ ಸಾಲಿನಲ್ಲಿಯೆ ಒಂದು ಪ್ರಸಿದ್ಧ ಮಠವಾಗಿದೆ. ಮ.ನಿ.ಪ್ರ ರಾಚೋಟೇಶ್ವರ ಮಹಾಸ್ವಾಮಿಗಳಿಂದ ಇಲ್ಲಿಯವರೆಗೆ ಅನೇಕ ಜನ ಸ್ವಾಮಿಗಳು ಸ್ಥಳಿಯ ಭಕ್ತರ ಉದ್ಧಾರಕ್ಕಾಗಿ ಅಹರ್ನಿಶ ಶ್ರಮಿಸಿ ಅಕ್ಷರ ದೀಪಬೆಳಗಿಸಿ ಜ್ಞಾನ ಗಂಗೆಯನ್ನು ಹರಿಸಿ ಹೋಗಿದ್ದಾರೆ. ಶ್ರೀ ಶಿವಲಿಂಗೇಶ್ವರ ಪುರಾಣವು ಗೇಯ ಪ್ರಧಾನವಾದ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಇಪ್ಪತ್ತೊಂದು ಅಧ್ಯಾಯಗಳ ಬೃಹತ್ಕೃತಿಯಾಗಿದೆ.
©2024 Book Brahma Private Limited.