ಹಿರಿಯ ಲೇಖಕ ಎಸ್.ಎಂ. ದುಲಂಗೆ ಅವರು ರಚಿಸಿರುವ ಕೃತಿ-‘ಸ್ವಾನುಭವದ ಸನ್ನಿಧಿಯಿಂದ’. ಲೇಖಕರು ತಮ್ಮ ಜೀವನಾನುಭವದಿಂದ ಕಂಡು ಕೊಂಡ ಅನುಭವಗಳನ್ನು ಅಕ್ಷರ ರೂಪದಲ್ಲಿ ಚಿಕ್ಕದಾಗಿ, ಚೊಕ್ಕವಾಗಿ ಸಂಗ್ರಹಿಸಿ ಕೊಟ್ಟಿದ್ದಾರೆ. ಅನುಭವದ ನುಡಿಮುತ್ತುಗಳೇ ಆಗಿವೆ. ಈ ಅನುಭವದ ಅಭಿವ್ಯಕ್ತಿಗೂ ಒಂದು ಶಿಸ್ತು ಕಲ್ಪಿಸಿದ್ದಾರೆ. ಉದಾಹರಣೆಗೆ ‘ಬದುಕು ನಮಗೆ ಬಂಡಿ. ಆದರೆ, ಬದುಕಿನ ಪ್ರವಾಸ ಆನಂದದಾಯಕ, ನಾವೇ ಅದಕ್ಕೆ ಬಂಡಿ ಆದರೆ ಅದನ್ನು ಎಳೆದುಕೊಂಡು ಹೋಗುವುದು ಪ್ರಯಾಸದಾಯಕ. ‘ಸೌಭಾಗ್ಯವು ಅನೇಕ ಸಲ ದೌರ್ಭಾಗ್ಯ ರೂಪದಲ್ಲಿ ಬರುತ್ತದೆ. ಮೊದಲು ನಾವು ಗೋಳಿಡುತ್ತೇವೆ ಆದರೆ, ಮುಂದೊಂದು ದಿನ ನಮ್ಮ ಅರಿವಿಗೆ ಬರುತ್ತದೆ’ ಪ್ರತಿ ಅನುಭವವು ಓದುಗರ ಬದುಕಿಗೆ ದಾರಿದೀಪವಾಗುವಂತಿವೆ. ಕೃತಿಯ ಮುಖಪುಟವು ಇಂತಹ ನುಡಿಮುತ್ತುಗಳಿಂದ ತುಂಬಿದ್ದು, ಕೃತಿಯನ್ನು ಇಡಿಯಾಗಿ ಓದಲು ಪ್ರೇರೇಪಿಸುತ್ತದೆ.
©2024 Book Brahma Private Limited.