ಹೆಚ್. ವಿ .ನಾಗರಾಜರಾವ್‌ರ ಕೃತಿಗ 'ಶತಾಲಂಕಾರಕೃಷ್ಣಶತಕಮ್' ಮತ್ತು 'ಶಾರ್ದೂಲವಿಕ್ರೀಡಿತಶತಕಮ್', ಈ ಮೊದಲೇ ಸಂಸ್ಕೃತಲಿಪಿ ವಿವರಣೆಗಳೊಂದಿಗೆ ಪ್ರಕಟವಾಗಿದ್ದವು. ಈಗ ಕನ್ನಡ ಲಿಪಿ ವಿವರಣೆಗಳೊಂದಿಗೆ ಪ್ರಕಟಗೊಳ್ಳುತ್ತಿವೆ. ಮೂಲಪಠ್ಯ ಮತ್ತು ಹೆಚ್ಚಿನ ಉದಾಹರಣೆ ಸಂಸ್ಕೃತದಲ್ಲಿದ್ದು, ಅವುಗಳ ಅನುವಾದ, ವಿವರಣೆಗಳು ಕನ್ನಡದಲ್ಲಿವೆ. ಕನ್ನಡ ಭಾಷಿಕರಲ್ಲಿ ಕಾವ್ಯಶಾಸ್ತ್ರವಿನೋದಿಗಳೂ ಪ್ರಯೋಜನ ಪಡೆಯಲೆಂಬುದು ಇಲ್ಲಿಯ ಸದಾಶಯ. ಸ್ವತಂತ್ರ ಹಾಗೂ ತುಲನಾತ್ಮಕ ಎರಡು ಮುಖಗಳಲ್ಲಿಯೂ ಉಪಯೋಗಕ್ಕೆ ಬರುವ ಸಾಹಿತ್ಯ ಸಾಮಗ್ರಿ ಇಲ್ಲಿದೆ. ನಮ್ಮ ಸಾಹಿತ್ಯ ಭಂಡಾರ ಹಿಗ್ಗಿದೆ. ಮೊದಲನೆಯ ಕೃತಿಯಲ್ಲಿ, ವಿವಿಧ ಛಂದಸ್ಸುಗಳನ್ನು ಬಳಸಿ ರಚಿಸಿದ ಕೃಷ್ಣಸ್ತುತಿ ವಸ್ತುವಾದ ನೂರಕ್ಕೂ ಹೆಚ್ಚಿನ ಸಂಸ್ಕೃತಪದ್ಯಗಳಿವೆ. ರಸಿಕಜನಮನೋಲ್ಲಾಸಿಯಾಗುವಂತೆ ಕೃಷ್ಣನ ಮಹಿಮೆಯನ್ನು ಮುಖ್ಯವಾಗಿ ವರ್ಣಿಸುತ್ತಲೇ, ಆಯ್ದ ನೂರು ಅಲಂಕಾರಗಳ ಲಕ್ಷಣಗಳಿಗೆ ಅವು ಲಕ್ಷವಾಗುವಂತೆಯೂ ಮಾಡಿರುವುದು ಈ ಪುಸ್ತಕದ ವಿಶೇಷ.
©2025 Book Brahma Private Limited.