ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ. ಮಹಾಭಾರತ ಯುದ್ಧಕ್ಕೆ ಕಾರಣೀಕರ್ತನೂ, ಯುದ್ಧನಿಲ್ಲಿಸುವವನೂ ಅವನೇ ಆಗಿದ್ದಾನೆ. ಆದರೆ, ಅವರವರ ಕರ್ಮಕ್ಕೆ ಅನುಸಾರವಾಗಿ ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸುವ ಅಗತ್ಯವಿದ್ದ ಪ್ರಯುಕ್ತ ಯುದ್ಧ ಅನಿವಾರ್ಯವಾಗುತ್ತದೆ. ಅಂದರೆ, ಏನೇನು ಸಂಭವಿಸಬೇಕಿತ್ತೋ ಅದೆಲ್ಲವೂ ಸಂಭವಿಸುತ್ತವೆ. ಇಂತಹ ನೀತಿಯಿಂದ, ವಿಶ್ವದ ಈ ಪರಿಚಲನೆಯು ಒಂದು ನಿರ್ದಿಷ್ಟ ಉದ್ದೇಶ ಹೊಂದಿದೆ. ಅದು ಪೂರ್ಣಗೊಳ್ಳಲು ನಿರ್ದಿಷ್ಟ ಚಟುವಟಿಕೆಯನ್ನು ಅವಲಂಬಿಸಿರುತ್ತದೆ ಎಂಬ ಸತ್ಯವನ್ನು ನಿರೂಪಿಸುವ ಕೃತಿಯು, ಓದುಗರನ್ನು ಸೆಳೆಯುತ್ತದೆ.
©2024 Book Brahma Private Limited.