‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಡಿ.ವಿ.ಜಿ. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಭಗವದ್ಗೀತೆಯ ಸಾರವನ್ನೇ ಮಂಕುತಿಮ್ಮನ ಕಗ್ಗದಲ್ಲಿ ನೀಡಲಾಗಿದೆ ಎನ್ನಲಾಗುತ್ತಿದೆಯಾದರೂ ಸನಾತನ ಧರ್ಮದ ಎಲ್ಲ ಜೀವನ ಮೌಲ್ಯಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ. ವೇದ, ಉಪನಿಷತ್, ಅಧ್ಯಾತ್ಮ, ಪಂಚತಂತ್ರ ಹೀಗೆ ಜೀವನ ಸಾರ್ಥಕತೆಗೆ ಪೂರಕವಾಗುವ ಜೀವನದ ಎಲ್ಲ ಮಗ್ಗಲುಗಳನ್ನು ಡಿವಿಜಿ ಅವರು ಸ್ಪರ್ಶಿಸಿದ್ದು, ಜನಸಾಮಾನ್ಯರಿಗೆ ಬದುಕಿನ ದರ್ಶನ ಮಾಡಿದ್ದಾರೆ. ಈ ಕೃತಿಯು ಭಾರತದ ವಿವಿಧ ಭಾಷೆಗಳಲ್ಲಿ ತರ್ಜುಮೆಗೊಂಡಿದೆ.
©2025 Book Brahma Private Limited.