ಆಚಾರ್ಯ ವಿನೋಬಾ ಅವರ "ಸ್ಥಿತಪ್ರಜ್ಞ ದರ್ಶನ"ವನ್ನು ಸಾಲಿ ರಾಮಚಂದ್ರರಾಯರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಸಾಲಿಯವರ ಮರಾಠೀ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ, ಭಗವದ್ಗೀತೆಯ ಅಧ್ಯಯನ, ಶ್ರೀ ಕೃಷ್ಣ ಭಕ್ತಿ, ವಿನೋಬಾ ಗೌರವ ಹಾಗೂ ಕನ್ನಡ ಪಾರಂಗತತೆಗಳೆಲ್ಲವೂ ಪ್ರಸ್ತುತ ಈ ಕೃತಿಯಲ್ಲಿ ಇರುವ ಮುಖ್ಯವಾದ ಅಂಶಗಳು.
ವಿನೋಬಾ ಅವರ ಭಗವದ್ಗೀತೆಯ ಅವಲೋಕನದ ಸ್ಥಿತಪ್ರಜ್ಞನ ಲಕ್ಷಣಗಳಲ್ಲಿನ ದರ್ಶನವನ್ನು ಸಾರಿ ಹೇಳಿದ್ದಾರೆ. ಭಗವದ್ಗೀತೆಯ ಬಹುಚರ್ಚಿತ ವ್ಯಾಖ್ಯಾನವನ್ನು ಇಲ್ಲಿ ನೀಡಿದ್ದಾರೆ. ಹದಿನೆಂಟು ವ್ಯಾಖ್ಯಾನಗಳನ್ನೊಳಗೊಂಡ ಈ ಪುಸ್ತಕದ ರಚನೆಯಲ್ಲಿ ಶಬ್ದದ ಸ್ವಾರಸ್ಯ, ಜ್ಞಾನ ಮತ್ತು ಧ್ಯಾನಗಳಿಗಿರುವ ಬೇಧಗಳು, ಅರ್ಥವ್ಯತ್ಯಾಸ, ಶ್ಲೋಕದ ಸಾರ, ವ್ಯಾಖ್ಯಾನ, ನಿರೂಪಣೆ, ಸ್ಥಿತಪ್ರಜ್ಞ ದರ್ಶನದಲ್ಲಿ 7 ಅಧಿಕರಣ, 18 ವ್ಯಾಖ್ಯಾನ, 44 ಖಂಡ, ಮತ್ತು 200 ಪರಿಚ್ಛೇದಗಳಿವೆ.
©2024 Book Brahma Private Limited.