15ನೆಯ ಶತಮಾನದಲ್ಲಿ ಇದ್ದ ಕಲ್ಲುಮಠದ ಪ್ರಭುಲಿಂಗದೇವರು ವಿರಚಿಸಿದ ಈ ಕೃತಿಯನ್ನು ಸಂ.ಶಿ. ಭೂಸನಮಠ ಅವರ ಸಂಪಾದಿಸಿದ್ದಾರೆ. ಲಿಂಗಲೀಲಾವಿಲಾಸ ಚರಿತ್ರ ಎಂದರೆ, ಶರಣ ಚಾರಿತ್ರೆ, ಶರಣ ಮಾರ್ಗ. ಕನ್ನಡ ಸಾಹಿತ್ಯದ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಕನ್ನಡಿಗರ ಕರ್ತವ್ಯ. ಅದರಲ್ಲಿಯೂ ಮಾನವ ಜೀವನದ ಪರಮ ಧೈಯವನ್ನು ಸಾಧಿಸಿ, ಅನುಭವಿಸಿ, ತಮ್ಮ ಅನುಭವವನ್ನು ಮಾನವ ಕುಲಕ್ಕೆ ನೀಡಿದ ಶಿವಶರಣರ ವಚನಗಳನ್ನು, ಅವರ ದಿವ್ಯ ಜೀವನವನ್ನು ಕುರಿತಿರುವ ಚರಿತೆಗಳನ್ನು ಕಾದುಕೊಂಡು ಹೋಗುವುದು ನಮ್ಮ ಪವಿತ್ರ ಕರ್ತವ್ಯ ಎಂಬ ನಿಲುವಿನೊಂದಿಗೆ ಲಿಂಗಲೀಲಾವಿಲಾಸ ಚರಿತ್ರವನ್ನು ಸಂಪಾದಿಸಿ ಸಿದ್ಧಪಡಿಸಲಾಗಿದೆ.
©2025 Book Brahma Private Limited.