ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ ಕೃತಿ-ಶ್ರೀಮದ್ರಾಮಾಯಣದ ಮಹಾವಾಕ್ಯಗಳು. ರಾಮಾಯಣವು ಜೀವನ ಆದರ್ಶಗಳನ್ನು ಹೇಳುತ್ತದೆ. ಮಹಾಭಾರತವು ಜೀವನದ ವಾಸ್ತವತೆಯ ದರ್ಶನ ಮಾಡಿಸುತ್ತದೆ. ರಾಮಾಯಣದಲ್ಲಿ ಆದರ್ಶವೇ ಇದ್ದು, ಮೇಲ್ನೋಟಕ್ಕೆ ವಾಸ್ತವಕ್ಕೆ ಹೊಂದಿಕೆಯಾಗಲಾರವು ಎಂದೆನಿಸುತ್ತವೆ. ಆದರೆ, ಜೀವನದ ಸುದೀರ್ಘ ಕಾಲದವರೆಗೆ ಆದರ್ಶಗಳ ಪಾಲನೆಯು ಇವುಗಳ ಅಗತ್ಯವನ್ನು ಹಾಗೂ ರಾಮಾಯಣದಲ್ಲಿ ಆದರ್ಶಗಳ ಮಹತ್ವವನ್ನು ತಿಳಿಸುತ್ತವೆ. ಜೀವನ ಸಾರ್ಥಕತೆಗೆ ಈ ಆದರ್ಶಗಳು ಮೂಲ ಕಾರಣವಾಗಿವೆ ಎಂಬ ಅಂತಿಮ ಸತ್ಯ ಅರಿವಿಗೆ ಬರುತ್ತದೆ. ಈ ನಿಟ್ಟಿನಲ್ಲಿ ತುಂಬಾ ಪರಿಣಾಮಕಾರಿಯಾದ ಗ್ರಂಥವಿದು.
©2025 Book Brahma Private Limited.